`ಐ ವಾಂಟ್ ಫಾಲೋ ಯೂ’ ವಿಡಿಯೋ ಹಾಡು ಬಿಡುಗಡೆ

ನಟ ವಿನೋದ್ ಪ್ರಭಾಕರ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ  ಫೈಟರ್ ಚಿತ್ರದ  ”  ಐ ವಾಂಟ್ ಟು ಫಾಲೋ ಯೂ” ವಿಡಿಯೋ ಹಾಡು ಬಿಡುಗಡೆಯಾಗಿದೆ.

ಹಾಡಿನಲ್ಲಿ ನಟಿ ಲೇಖಾ ಚಂದ್ರ , ನಾಯಕನ್ನು ಒಲೈಸಿಕೊಳ್ಳುವ ಹಾಡು ಇದಾಗಿದೆ.ಸಂಗೀತ ನೀಡಿರುವ ಗುರುಕಿರಣ್ ಸೇರಿದಂತೆ ಮತ್ರಿತರ ಸಮ್ಮಖದಲ್ಲಿ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.ಕವಿರಾಜ್ ಬರೆದಿರುವ ಹಾಡಿಗೆ ಕೆ.ಎಸ್ ಚೈತ್ರ ಹಾಡಿದ್ದಾರೆ.

ನಿರ್ದೇಶಕ ನೂತನ್ ಉಮೇಶ್, ಸುಂದರ ಹಾಡನ್ನು   ಸಂಗೀತ ನಿರ್ದೇಶಕ ಗುರು ಕಿರಣ್, , ಎರಡು ಅರ್ಥ ಬರುವ ಪದಗಳನ್ನು ಮುಂದಿಟ್ಟುಕೊಂಡು ಹಾಡು ಮಾಡಿದ್ದಾರೆ. ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು.

ನಟ ವಿನೋದ್ ಪ್ರಭಾಕರ್, ರೈತರಿಗಾಗಿ ಮಾಡಿದ ಸಿನಿಮಾ ,ಸಿನಿಮಾ‌ದ ಕೊನೆಯ 20 ನಿಮಿಷಗಳ ಕಾಲ ಯಾವ ಕಾರಣಕ್ಕಾಗಿ ಹೋರಾಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ .ನನ್ನ ತಾಯಿ ಗುರುಕಿರಣ್ ದೊಡ್ಡ ಫ್ಯಾನ್, ನಿಮ್ಮ ಪ್ರತಿ ಸಿನಿಮಾ ಹಾಡು ಇಷ್ಟ ಪಟ್ಟಿದ್ದರು.ನಿಮ್ಮ ಜೊತೆ ಸಿನಿಮಾ ಮಾಡಬೇಕೆನ್ನುವ, ತುಂಬಾ ದಿನದ ಕನಸು ನನಸಾಗಿದೆ. ಚೈತ್ರಾ ಅವರ ಅಭಿಮಾನಿ, ಕವಿರಾಜ್ ಉತ್ತಮ ಹಾಡು ಮಾಡಿದ್ದಾರೆ. ಪ್ರತಿ ಪದದಲ್ಲಿ ಎರಡು ಅರ್ಥಗಳಿವೆ.

ಹಾಡು ಚೆನ್ನಾಗಿ ಮೂಡಿ ಬಂದಿದೆ.ಚಿತ್ರಕ್ಕಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು. ನಟಿ ಲೇಖಾ ಚಂದ್ರ  ಮಾತನಾಡಿ ಚಿತ್ರಕಲಾವಿದೆ. ನಾಯಕನ್ನು ಫಾಲೋ‌ ಮಾಡುವ ಹುಡುಗಿ ಒಳ್ಳೆಯ ಪಾತ್ರ ಎಂದರು.

ನಿರ್ಮಾಪಕ ಸೋಮಶೇಖರ್  ಮಾತನಾಡಿ,  ಈ ಹಾಡು  ಚಿತ್ರೀಕರಣದ ನಂತರ ಹಾಡು ನೋಡಿ ಖುಷಿ ಆಯ್ತಾ. ಹಾಡು ಬಿಡುಗಡೆ ನಂತರ ಇಡೀ ಕರ್ನಾಟಕ ಫಾಲೋ‌ಮಾಡುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಗುಣರಂಜನ್ ಶೆಟ್ಟಿ ಸೇರಿದಂತೆ ಮತ್ತಿತರು ಶುಭ ಹಾರೈಸಿದರು.

ಯಾವುದೇ ಟೈಟಲ್ ಬೇಡ

ನನ್ನನ್ನು ವಿನೋದ್ ಪ್ರಭಾಕರ್ ಅಂತ ಕರೀರಿ ಯಾವುದೇ ಟೈಟಲ್ ನಿಂದ ಕರಿಯಬೇಡಿ ಎಂದು ನಟ ವಿನೋದ್  ಪ್ರಭಾಕರ್ ಅಭಿಮಾನಿಗಳಿಗೆ ಮನವಿ ಮಾಡಿದರು. ಇನ್ನುಮುಂದೆ ಎಚ್ಚರಿಕೆಯಿಂದ‌ ಕೆಲಸ ಮಾಡುತ್ತಿದ್ದೇ‌ನೆ.ಎಡವುದಿಲ್ಲ. ದುರಂಹಾಕರಿಂದ ಅಲ್ಲ. ಒಳ್ಳೆಯ ಸಿನಿಮಾ ಒಳ್ಳೆಯ ಕಂಟೆಂಟ್ ಸಿನಿಮಾ‌ ಮಾಡುವ ಉದ್ದೇಶ ಎಂದರು.