
ರಾಯಚೂರು, ಏ.೧೪-ನಗರಸಭೆಯ ಸದಸ್ಯೆಯೊಬ್ಬರ ಪತಿ ರವೀಂದ್ರ ಜಲ್ದಾರ್ ವಿರುದ್ಧ ಆದಾಯಕ್ಕೂ ಮೀರಿ ಸಂಪಾದನೆ ಮಾಡಿರುವ ಕುರಿತು ಐಟಿ ಮತ್ತು ಇಡಿ ಅಧಿಕಾರಿಗಳಿಗೆ ದೂರು ನೀಡಿದ್ದು ಅಧಿಕಾರಿಗಳು ಸೂಕ್ತ ಸಮಯದಲ್ಲಿ ತನಿಖೆ ಹಾಗೂ ತಪಾಸಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಯಚೂರು ನಗರ ಉಸ್ಮಾನೀಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ಮಹಾವೀರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಕಾನೂನು ಬಾಹಿರವಾಗಿರುವ ನಗರಸಭೆ ಆದಾಯ ಉತ್ಪನ್ನಗಳ ಕರ ವಸೂಲಿ ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
೩೫ ವಾರ್ಡುಗಳಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಎಂ.ವೀರಣ್ಣ ಸರ್ಕಲ್‌ನಲ್ಲಿ ಇರುವ ಅನಧಿಕೃತ ಮಾರುಕಟ್ಟೆ ತೆರವುಗೊಳಿಸಲು ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಭುನಾಯಕ, ಕೆ.ವಿ. ಖಾಜಪ್ಪ, ಉದಯಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.