ಐ.ಟಿ.ಎಫ್ ಕಲಬುರಗಿ ಓಪನ್-2023 ಟೆನಿಸ್ ಟೂರ್, ಪಂದ್ಯ ವೀಕ್ಷಿಸಲು ಮನವಿ

ಕಲಬುರಗಿ,ನ.25: ಅಲ್ಟ್ರಾಟೆಕ್ ಪ್ರಾಯೋಜಕತ್ವದ ಐ.ಟಿ.ಎಫ್ ಕಲಬುರಗಿ ಓಪನ್ ಪುರುಷರ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಟೆನಿಸ್ ಅಂಗಣದಲ್ಲಿ ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ
ಬೆಳಿಗ್ಗೆ 9.30 ರಿಂದ ಸಾಯಂಕಾಲ 5 ಗಂಟೆ ವರೆಗೆ ನಡೆಯಲಿದೆ.

ಕ್ರೀಡಾಕೂಟ ವೀಕ್ಷಣೆ ಉಚಿತವಾಗಿದ್ದು,
ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪಂದ್ಯಾವಳಿಯನ್ನು ವೀಕ್ಷಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕೆಂದು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಲಬುರಗಿ
ಸಹಾಯಕ ನಿರ್ದೇಶಕಿ ಗಾಯತ್ತಿ ಮನವಿ ಮಾಡಿದ್ದಾರೆ.