ಐ ಕ್ಯೂ ಇಂಟರ್ ನ್ಯಾಶನಲ್ ಶಾಲೆ: ಆಹಾರ ಮೇಳ

ಸಂಜೆವಾಣಿ ವಾರ್ತೆ
ಸಿಂಧನೂರು ಜ.೨೭- ತಾಲೂಕಿನ ಇಜೆ ಹೊಸಳ್ಳಿ ಕ್ಯಾಂಪ್ ನಲ್ಲಿರುವ ಐ.ಕ್ಯೂ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನದಂದು ಶಾಲಾ ಮಕ್ಕಳೇ ತಯಾರಿಸಿದ ಬಗೆ ಬಗೆ ರುಚಿಯಾದ ತಿಂಡಿ ತಿನಿಸು ಒಳಗೊಂಡ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.
ಶುಕ್ರವಾರ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ಬಳಗದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಿಹಿ ತಿನಿಸು, ಖಾರದ ತಿನಿಸುಗಳು, ಪಾನಿ ಪುರಿ ,ಸಮೋಸ ಸೇರಿದಂತೆ ನೋಡುಗರ ಬಾಯಲ್ಲಿ ನೀರುಣಿಸುವಂತೆ ಇತ್ತು. ಈ ಆಹಾರ ಮೇಳದಲ್ಲಿ ಮಕ್ಕಳ ಭಾಗವಹಿಸುವಿಕೆ ತುಂಬಾ ಇತ್ತು ಇದರಲ್ಲಿ ಪಾಲಕರು ಪಾಲ್ಗೊಂಡು ಸವಿಯಾದ ಶುಚಿ ರುಚಿಯಾದ ಆಹಾರವನ್ನು ಸವಿದರು.
ಇದೇ ಸಂದರ್ಭದಲ್ಲಿ ಕೊರಿಪೆಲ್ಲ ರಾಮಚಂದ್ರ ರಾವ್, ಸುಗುಣ, ಕೆ.ರಾಘವೇಂದ್ರ, ಪ್ರಾಚಾರ್ಯರಾದ ರಾಜಶೇಖರ ,ಮುಖ್ಯ ಗುರುಗಳಾದ ಬಸವರಾಜ ಇತರರು ಮಕ್ಕಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.