ಐ.ಎ.ಎಸ್., ಐ.ಪಿ.ಎಸ್. ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ

ದಾವಣಗೆರೆ. ಜೂ.೧೩: ಬೆಂಗಳೂರಿನ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಶ್ರಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆಯಾದ ವಾಸವಿ ಅಕಾಡೆಮಿ ವತಿಯಿಂದ ಜುಲೈ ೭ ರಂದು ಐಎಎಸ್, ಐಪಿಎಸ್ ಪರೀಕ್ಷೆಯ ತರಬೇತಿಗಾಗಿ ಪ್ರವೇಶ ಪರೀಕ್ಷೆ ಜರುಗಲಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಜಿ ನಾಗೇಂದ್ರ ಪ್ರಕಾಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌ ವಾಸವಿ ಅಕಾಡೆಮಿಯು 1908 ರಿಂದಲೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಕುಟುಂಬದ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ವಾಸವಿ ಅಕಾಡೆಮಿ ಮೂಲಕ ಲೋಕಸೇವಾ ಆಯೋಗದ ಪರೀಕ್ಷೆಗಳಾದ ಐ.ಎ.ಎಸ್., ಐ.ಪಿ.ಎಸ್‌, ಇತ್ಯಾದಿ ಪರೀಕ್ಷೆಗಳನ್ನು ಬರೆಯಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ತರಬೇತಿ ಮತ್ತು ಮಾರ್ಗದರ್ಶನವನ್ನು ಕಳೆದ 5 ವರ್ಷಗಳಿಂದಲೂ  ನೀಡುತ್ತಾ ಬಂದಿದೆ2024 ರಲ್ಲಿ ಲೋಕಸೇವಾ ಆಯೋಗವು ಕೈಗೊಳ್ಳುವ ಪರೀಕ್ಷೆಗಳನ್ನು ಬರೆಯಲು ಇಚ್ಚಿಸುವ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ, ಬೆಂಗಳೂರಿನ ವಾಸವಿ ಆಕಾಡೆಮಿಯಿಂದ ಜುಲೈ 02 ರ ಭಾನುವಾರದಂದು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ಉತ್ತೀರ್ಣರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಗ ಸಂಪೂರ್ಣವಾದ ಶಿಕ್ಷಣ, ಊಟ, ವಸತಿ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದ ಪದವಿಯನ್ನು ಹೊಂದಿರಬೇಕು. ಅತ್ಯಂತ ಹಿರಿಯ ಅನುಭವಿ, ಪರಿಣಿತ ಬೋಧಕ ತಂಡವನ್ನು ಹೊಂದಿದೆ. 5ನೇ ವರ್ಷದ ಯು.ಪಿ.ಎಸ್.ಸಿ. ತರಬೇತಿಯ ಬ್ಯಾಚ್‌ಗೆ ಸೇರಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನ ಜೂನ್ 25 ಆಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸುವ ದೂರವಾಣಿ ಸಂಖ್ಯೆ 8073499217 ಅಕಾಡೆಮಿಯ ವೆಬ್‌ಸೈಟ್ https://vasaviacademy.com ಇಲ್ಲಿಗೆ ಭೇಟಿ ನೀಡಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಾರ್.ಎಲ್ ಪ್ರಭಾಕರ್,ಆರ್.ಜಿ ಶ್ರೀನಿವಾಸಮೂರ್ತಿ, ಬಿ.ಟಿ ಅಶ್ವತ್ ರಾಜ್,ಕಿರಣ್,ಗೀತಾ ಪ್ರಸಾದ್,ಎಂ.ನಾಗರಾಜ್ ಗುಪ್ತ ಉಪಸ್ಥಿತರಿದ್ದರು.