ಐಸೋಲೇಷನ್ ಸೋಂಕಿತರ ಭೇಟಿ

ಜಗಳೂರು.ಮೇ.೧೮;  ಸಾರ್ವಜನಿಕರಿಗೆ ಕೋರೋನ ವೈರಸ್ ಸೋಂಕು ಪತ್ತೆಯಾದಲ್ಲಿ
ತಾಲ್ಲೂಕು ಆರೋಗ್ಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳು  ಐಸೋಲೇಶನ್ ನಲ್ಲಿರುವ ಅವರಿಗೆ ಪ್ರತ್ಯೇಕ ಸೌಲಭ್ಯಗಳ ಕುರಿತು ಖುದ್ದಾಗಿ ಪರಿಶೀಲಿಸಿ ಪ್ರತ್ಯೇಕ ಸೌಲಭ್ಯವಿಲ್ಲದ ಸೋಂಕಿತ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರ್ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇತ್ತೀಚೆಗೆ ನಡೆದ ಸಭೆಯಲ್ಲಿ 

ಸೂಚಿಸಿದಂತೆಮುಖ್ಯಾಧಿಕಾರಿ ರಾಜು ಡಿ ಬಣಕರ್ ಮತ್ತು ಸಿ.ಪಿ.ಐ ಮಂಜುನಾಥ ಪಂಡಿತ್ ಪಿ.ಎಸ್.ಐ ಸಂತೋಷ್ ಬಾಗೋಜಿ  ಅವರು ಜಗಳೂರು ಪಟ್ಟಣದಲ್ಲಿ ಹೋಂ ಐಸೋಲೇಶನ್ ನಲ್ಲಿರುವ 14 ಜನ ಸೋಂಕಿತ ವ್ಯಕ್ತಿಗಳಲ್ಲಿ ಒಬ್ಬರು ಮರಣಹೊಂದಿದ್ದಾರೆ ಇನ್ನುಳಿದವರು ಬೇರೆ ಗ್ರಾಮ ಮತ್ತು ಜಿಲ್ಲೆಗಳಲ್ಲಿ ಅವರ ತೋಟದ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ ಇವರನ್ನು ಖುದ್ದಾಗಿ ಭೇಟಿ ನೀಡಿ ಪ್ರತ್ಯೇಕ ಶೌಚಾಲಯ ಕೋಣೆ ಸ್ನಾನಗೃಹ ಇರುವ ಬಗ್ಗೆ ಖಚಿತಪಡಿಸಿಕೊಂಡು ಅಂಥ ವ್ಯಕ್ತಿಗಳಿಗೆ ಮಾತ್ರ ಹೋಂ ಐಸೋಲೇಶನ್ ನಲ್ಲಿ ಇರಲು ಬಿಟ್ಟು ಇನ್ನುಳಿದಂತೆ  ಯಾವುದೇ ಸೌಲಭ್ಯಗಳಿಲ್ಲದೆ ಇರುವ ಸೋಂಕಿತ ವ್ಯಕ್ತಿಗಳನ್ನು ತಾಲೂಕಿನ ಬೇರೆ ಸ್ಥಳಗಳಲ್ಲಿ ವಾಸಮಾಡುತ್ತಿದ್ದಾರೆ ಎಂದು ಪ.ಪಂ ಮುಖ್ಯಧಿಕಾರಿ ರಾಜು ಡಿ ಬಣಕರ್ ಕ್ರಮ ಕೈಗೊಂಡಿದ್ದಾರೆಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಆರಕ್ಷಕ ಉಪ ನಿರೀಕ್ಷಕರಾದ ಸಂತೋಷ್ ಬಾಗೋಜಿಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್ ಆರೋಗ್ಯ ನಿರೀಕ್ಷಕ ಕೀಪಾಯತ್ ಅಮ್ಮದ್ ಸಿಬ್ಬಂದಿ ಪುನೀತ್, ಪೊಲೀಸ್ ಸಿಬ್ಬಂದಿಗಳು ಇದ್ದರು