ಐಸಿಸ್ ನಂಟು ಯಾದಗಿರಿ ವ್ಯಕ್ತಿಗೆ ಎನ್‌ಐಎ ಡ್ರಿಲ್

ಯಾದಗಿರಿ, ಸೆ.೧೪- ಜಾರ್ಖಂಡ್‌ನಲ್ಲಿ ಬಂಧಿತ ಐಸಿಸ್ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ಜಿಲ್ಲೆಯ ವ್ಯಕ್ತಿಯೊಬ್ಬನ ಮನೆಗೆ ಧಾವಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ರಾಂಚಿಯಲ್ಲಿ ಐಸಿಸ್ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಯಾದಗಿರಿ ಜಿಲ್ಲೆಯ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಬಾಯ್ಬಿಟ್ಟಿದ್ದು, ಕೂಡಲೇ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯ ಮನೆಗೆ ಭೇಟಿ ನೀಡಿ ವಿಚಾರಣೆ ಕೈಗೊಂಡು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಬಂಧಿತ ಐಸಿಸ್ ಉಗ್ರನ ಜೊತೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕ ಹೊಂದಿದ್ದ ಖಾಲಿದ್ ಅಹ್ಮದ್ ಮನೆಗೆ ಭೇಟಿ ನೀಡಿದ ಸಚ್ಚಿದಾನಂದ ಶರ್ಮಾ ನೇತೃತ್ವದ ಎನ್‌ಐಎ ತಂಡ, ಖಾಲಿದ್‌ನನ್ನು ತೀವ್ರ ವಿಚಾರಣೆ ನಡೆಸಿತು. ಅಲ್ಲದೆ, ಸೆಪ್ಟೆಂಬರ್ ೨೦ ರಂದು ರಾಂಚಿಯಲ್ಲಿರುವ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ವಿಚಾರಣೆ ವೇಳೆ ಖಾಲಿದ್ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾಗಿ ತಿಳಿದುಬಂದಿದೆ.
ಆಂಧ್ರ ಪ್ರದೇಶದ ಪಾಸಿಂಗ್ ಇರುವ ವಾಹನದಲ್ಲಿ ಎನ್‌ಐಎ ತಂಡ ಆಗಮಿಸಿ ಎರಡನೇ ಬಾರಿ ಖಾಲಿದ್ ಮನೆಗೆ ಭೇಟಿ ನೀಡಿದ ತಂಡ, ಸತತ ನಾಲ್ಕು ಗಂಟೆ ವಿಚಾರಣೆ ನಡೆಸಿದೆ. ಈ ಹಿಂದೆಯೂ ಮನೆಗೆ ಭೇಟಿ ನೀಡಿ ಖಾಲಿದ್‌ನನ್ನು ವಿಚಾರಣೆ ನಡೆಸಿತ್ತು.
ಜುಲೈ ತಿಂಗಳಲ್ಲಿ ರಾಂಚಿಯಲ್ಲಿ ಐಎಸ್‌ಐ ಉಗ್ರ ಸಂಘಟನೆಗೆ ಸೇರಿದ ಓರ್ವ ಉಗ್ರನನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಈತನ್ನು ವಿಚಾರಣೆ ನಡೆಸಿದಾಗ ಇನ್ಸ್ಟಾಗ್ರಾಮ್‌ನಲ್ಲಿ ಶಹಾಪುರದ ಖಾಲಿದ್ ಸಂರ್ಪದಲ್ಲಿರುವುದು ತಿಳಿದುಬಂದಿತ್ತು. ಹೀಗಾಗಿ ಎನ್‌ಐಎ ಅಧಿಕಾರಿಗಳಳು ಖಾಲಿದ್‌ನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ