ಐಸಿಸಿ ರ್‍ಯಾಂಕಿಂಗ್‌ನಲ್ಲಿ ಕೊಯ್ಲಿ ಹಿಂದಿಕ್ಕಿದ ರಾಹುಲ್

ದುಬೈ, ಡಿ. 23-ಭಾರತೀಯ ಕ್ರಿಕೆಟ್ ಟಿ20 ಬೌಲಿಂಗ್ ಹಾಗೂ ಆಲ್‌ರೌಂಡ್‌ ವಿಭಾಗದ ಕ್ರಮಾಂಕದಲ್ಲಿ ಅಫ್ಗಾನಿಸ್ತಾನ ಜೋಡಿ ಮೊದಲ ಸ್ಥಾನದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ರಶೀದ್‌ ಖಾನ್‌, ಆಲ್‌ರೌಂಡರ್‌ಗಳಲ್ಲಿ ಮೊಹಮ್ಮದ್‌ ನಬಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಬ್ಯಾಟ್ಸ್‌ಮನ್ ಕರ್ನಾಟಕದ‌‌ ಕೆ.ಎಲ್. ರಾಹುಲ್ ಐಸಿಸಿ ಟಿ20 ranking ನಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ ಎಂದು ಐಸಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಟ್ಸ್‌ಮನ್, ಬೌಲರ್ ಹಾಗೂ ಆಲ್ ರೌಂಡರ್ ವಿಭಾಗಗಳ ಅಗ್ರ 10 ಮಂದಿ ಪಟ್ಟಿಯಲ್ಲಿ ಭಾರತದ ರಾಹುಲ್ ಹಾಗೂ ವಿರಾಟ್ ಮಾತ್ರ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
ಬ್ಯಾಟ್ಸ್‌ಮನ್ ಗಳ ವಿಭಾಗದಲ್ಲಿ ಇಂಗ್ನೆಂಡಿನ ಡೇವಿಡ್ ಮಲಾನ್ 915, ಬಾಬರ್ ಅಜಂ 820 ಅಂಕಗಳಿಸಿ ಮೊದಲ ಹಾಗೂ ಎರಡನೇ ಸ್ಥಾನ
ದಲ್ಲಿದ್ದಾರೆ.‌ 816 ಅಂಕಗಳಿಸಿರುವ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ. 697 ಪಾಯಿಂಟ್ ಪಡೆದಿರುವ ಕೊಹ್ಲಿ ಏಳನೇ
ನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್‌ನ ಮೂರೂ ಮಾದರಿಯ ಬ್ಯಾಟ್ಸ್‌ಮನ್‌ಗಳ ಕ್ರಮಾಂಕದಲ್ಲಿ ಕೊಹ್ಲಿ ಅವರು ಅಗ್ರ 10ರ ಪಟ್ಟಿಯಲ್ಲಿದ್ದಾರೆ. ಏಕದಿನ ಮೊದಲ ಹಾಗೂ ಟೆಸ್ಟ್ ಮಾದರಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.
ತಂಡಗಳ ಪೈಕಿ 275 ಅಂಕಗಳೊಂದಿಗೆ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. 272 ಅಂಕಗಳಿಸಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನ ಆಕ್ರಮಿಸಿಕೊಂಡಿದೆ. 268 ಅಂಕ ಪಡೆದಿರುವ ಭಾರತ ಮೂರನೇ ಸ್ಥಾನ ಆಕ್ರಮಿಸಿಕೊಂಡಿದೆ.
ಟಿ20 ಬೌಲಿಂಗ್ ಹಾಗೂ ಆಲ್‌ರೌಂಡ್‌ ವಿಭಾಗದ ಕ್ರಮಾಂಕದಲ್ಲಿ ಅಫ್ಗಾನಿಸ್ತಾನ ಜೋಡಿ ಮೊದಲ ಸ್ಥಾನದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ರಶೀದ್‌ ಖಾನ್‌, ಆಲ್‌ರೌಂಡರ್‌ಗಳಲ್ಲಿ ಮೊಹಮ್ಮದ್‌ ನಬಿ ಅಗ್ರ‌ಪಟ್ಡಕ್ಕೇರಿದ್ದಾರೆ.