ಐಸಿಸಿ ಫೈನಲ್ ಟೆಸ್ಟ್ ನ್ಯೂಜಿಲೆಂಡ್ ಗೆ ಗೆಲ್ಲುವ ಅವಕಾಶ:ಬ್ರೆಟ್ ಲೀ ಭವಿಷ್ಯ

ನವದೆಹಲಿ, ಜೂ.5-ಭಾರತ ಮತ್ತು ನ್ಯೂಜಲೆಂಡ್ ತಂಡಗಳ ನಡುವಣ ಚೊಚ್ಚಲ ಐಸಿಸಿ ಟೆಸ್ಟ್ ಕ್ರಿಕೆಟ್‌ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ಮೈದಾನದ ಸ್ಥಿತಿಗತಿ ಗಮನಿಸಿದರೆ ಎರಡೂ ತಂಡಗಳಿಗೆ ಸಮಾನ ಅವಕಾಶವಿದ್ದರೂ ನ್ಯೂಜೆಲೆಂಡ್ ತಂಡಕ್ಕೆ ಗೆಲ್ಲಲು ಹೆಚ್ಚು ಅವಕಾಶವಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರೆಟ್ ಲೀ, ಸೌತಾಂಪ್ಟನ್ ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಿಚ್ ನಿರ್ಣಾಯಕ ಪಾತ್ರ ವಹಿಸಲಿದೆ. ಚೆಂಡು‌ ಪುಟಿಲೇಳಲಿದ್ದು, ಇಂತಹ ಪಿಚ್ ಗಳಲ್ಲಿ ಬೌಲಿಂಗ್ ಮಾಡಿದ ಅನುಭವ ನ್ಯೂಜಿಲೆಂಡ್ ವೇಗದ ಬೌಲರ್ ಗಳಿಗಿದೆ. ಇದು ಫೈನಲ್ ಪಂದ್ಯದಲ್ಲಿ ನಿರ್ಣಾಯಕ‌ ಪಾತ್ರ ವಹಿಸಬಹುದು. ಈ ಅಂಶದಿಂದಾಗಿ ಭಾರತದ ವಿರುದ್ದ ಕಿವೀಸ್ ಮೇಲುಗೈ ಸಾಧಿಸಬಹುದೆಂದು ತಾವು ಭಾವಿಸಿರುವುದಾಗಿ ತಿಳಿಸಿದರು.
ಉಭಯ ತಂಡಗಳಲ್ಲೂ ಉತ್ತಮ‌ ಬ್ಯಾಟ್ಸಮನ್ ಗಳಿದ್ದಾರೆ. ಆದರೆ ಎಲ್ಲವೂ ಸ್ವಿಂಗ್ ಬೌಲಿಂಗ್ ಮೇಲೆ ಅವಲಂಬಿತವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಬೌಲಿಂಗ್‌ ಪ್ರಮುಖ ಪಾತ್ತವಹಿಸಲಿದೆ.ಉತ್ತಮ ಬೌಲಿಂಗ್ ಪ್ರದರ್ಶಿಸುವ ತಂಡ ಫೈನಲ್ ಪಂದ್ಯ ಗೆಲ್ಲಲಿದೆ ಎಂದು ವಿಶ್ಲೇಷಿಸಿದರು.
ಭಾರತ ತಂಡ ನಿನ್ನೆ ಇಂಗ್ಲೆಂಡ್ ನ ಏಗಾಸ್ ಬೌಲ್ ಹೋಟೆಲ್‌ ತಲುಪಿದ್ದು, ಬಯೋ ಬಬಲ್‌ಗೆ ಪ್ರವೇಶ ಮಾಡುವುದಕ್ಕೂ ಮುನ್ನ ಕ್ವಾರಂಟೈನ್‌ ಅವಧಿ ಮುಗಿಸಬೇಕಾಗಿದೆ. ಮತ್ತೊಂದೆಡೆ ನ್ಯೂಜಿಲೆಂಡ್‌ ತಂಡ ಈಗಾಗಲೇ ಇಂಗ್ಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಎದುರಿಸುತ್ತಿದೆ. ಲಾರ್ಡ್ಸ್ ಪಂದ್ಯ ಮುಗಿದ ಬಳಿಕ ಎರಡನೇ ಪಂದ್ಯವಾಡಲಿದೆ.