ಐಸಿಸಿ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ದುಬೈ, ಜು.18- ನಿನ್ನೆಯಷ್ಟೇ ಇಂಗ್ಲೆಂಡ್ ವಿರುದ್ದದ ಅಂತಿಮ‌ ಪಂದ್ಯದಲ್ಲಿ ‌ಗೆಲುವು ಸಾಧಿಸಿಬ 2-1ರಿಂದ ಸರಣಿ ಗೆದ್ದ ಭಾರತ ಐಸಿಸಿ ranking ಪಟ್ಟಿಯಲ್ಲಿ ಮೂರನೇ ಸ್ಥಾನ ಭದ್ರಪಡಿಸಿಕೊಂಡಿದೆ.
128 ಪಾಯಿಂಟ್ ಗಳಿಸಿರುವ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ. 121 ಅಂಕಗಳಿಸಿರುವ ಇಂಗ್ಲೆಂಡ್ ಎರಡನೇ ಸ್ಥಾನ ಆಕ್ರಮಿಸಿಕೊಂಡರೆ 109 ಪಾಯಿಂಟ್ ಗಳಿಸಿರುವ ಭಾರತ ಮೂರನೇ ಹಾಗೂ 106 ಪಾಯಿಂಟ್ ಗಳಿಸಿರುವ ಪಾಕಿಸ್ತಾನ 4ನೇ ಸ್ಥಾನದಲ್ಲಿದೆ.
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ಉತ್ತಮ‌ ಪ್ರದರ್ಶನ ನೀಡಿದರೆ ಭಾರತ‌ ಪಾಯಿಂಟ್ ಪಟ್ಟಿಯಲ್ಲಿ ಏರಿಕೆ ಕಾಣಲಿದೆ. ನಿನ್ನೆ‌ ಇಂಗ್ಲೆಂಡ್ ವಿರುದ್ದ ಮೂರನೇ ಪಂದ್ಯದಲ್ಲಿ ಬಾರತ ಐದು ವಿಕೆಟ್ ಭರ್ಜರಿ ಜಯ ದಾಖಲಿಸಿತ್ತು.