ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್​ 11ನೇ ಸ್ಥಾನದಲ್ಲಿ ಮಯಾಂಕ್, ಅಶ್ವಿನ್ ಗೆ 2ನೇ ಸ್ಥಾನ

ದುಬೈ , ಡಿ. 8-ಭಾರತ-ನ್ಯೂಜಿಲೆಂಡ್​​​ ನಡುವಿನ ಟೆಸ್ಟ್​​​ ಸರಣಿ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಟೆಸ್ಟ್​​​ ರ‍್ಯಾಂಕಿಂಗ್​ ಪಟ್ಟಿ ಬಿಡುಗಡೆಯಾಗಿದೆ.
ಟೀಂ ಇಂಡಿಯಾದ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್​​​ ಅಗರವಾಲ್​​​​ 30 ಸ್ಥಾನ ಮೇಲೆಕ್ಕೇರುವ ಮೂಲಕ 11 ನೇ ಸ್ಥಾನಕ್ಜೆ ಲಗ್ಗೆಹಾಕಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನ ಅಲಂಕರಿಸಿದ್ದಾರೆ‌.
ನ್ಯೂಜಿಲೆಂಡ್ ​​ ವಿರುದ್ಧದ ಎರಡನೇ ಟೆಸ್ಟ್​​​ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಮಯಾಂಕ್​​​ ಅಗರವಾಲ್​​​ ಕ್ರಮವಾಗಿ 150 ಹಾಗೂ 62ರನ್​​​ಗಳಿಕೆ ಮಾಡಿದ್ದರು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.
ಇದೀಗ ಐಸಿಸಿ ಟೆಸ್ಟ್​​​ ಶ್ರೇಯಾಂಕದಲ್ಲಿ ಅತ್ಯುತ್ತಮ ಜಿಗಿತ ಕಂಡಿದ್ದಾರೆ. 30 ಸ್ಥಾನ ಮೇಲೇರಿರುವ ಈ ಮಯಂಕ್ 11ನೇ ರ‍್ಯಾಂಕ್ ಅಲಂಕರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಉತ್ತಮ ರನ್​​ಗಳಿಕೆ ಮಾಡಿದ್ರೆ ಟಾಪ್​​ 10ರೊಳಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಈ ಹಿಂದೆ 2019ರಲ್ಲಿ ಮಯಾಂಕ್​​​ ಅಗರವಾಲ್​​ ಟಾಪ್​ 10ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇದಾದ ಬಳಿಕ ಅವರು ಟಾಪ್​​ 10ರಲ್ಲಿ ಕಾಣಿಸಿಕೊಂಡಿಲ್ಲ. ಉಳಿದಂತೆ ಇಂಗ್ಲೆಂಡ್​​ನ ಜೋ ರೂಟ್​​​ ಮೊದಲ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.
ರೋಹಿತ್​ ಶರ್ಮಾ 5 ಹಾಗೂ ವಿರಾಟ್​​ ಕೊಹ್ಲಿ 6ನೇ ಸ್ಥಾನದಲ್ಲಿದ್ದರೆ, ಶುಬ್ಮನ್​​ ಗಿಲ್​ ಕೂಡ 22 ಸ್ಥಾನ ಜಿಗಿತ ಕಂಡು 46ನೇ ಸ್ಥಾನದಲ್ಲಿದ್ದಾರೆ. ಅಜಿಂಕ್ಯ ರಹಾನೆ 2 ಸ್ಥಾನ ಕುಸಿದು 28ನೇ ಸ್ಥಾನಕ್ಕೆ ಹಾಗೂ ಚೇತೇಶ್ವರ ಪೂಜಾರ 1 ಸ್ಥಾನ ಕುಸಿದು 17ನೇ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ.
ಬೌಲಿಂಗ್​ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾದ ಸ್ಪಿನ್ನರ್​ ಆರ್​​.ಅಶ್ವಿನ್​​​ 2ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​​​ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.