ಐಸಿಸಿ ಆಲ್ ರೌಂಡರ್ ಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಅಶ್ವಿನ್

ದುಬೈ, ಫೆ 17-ಐಸಿಸಿ ಆಲ್ ರೌಂಡರ್ ಗಳ‌ ರಬಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಐದನೇ ಸ್ಥಾನಕ್ಜೇರಿದ್ದಾರೆ.
ನಿನ್ನೆ ಇಂಗ್ಲೆಂಡ್ ವಿರುದ್ದ ನಡೆದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಶತಕ ಹಾಗೂ ಎಂಟು ವಿಕೆಟ್ ಪಡೆದು ಭಾರತದ ಗೆಲುವಿನ‌ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಐಸಿಸಿ ಆಲ್ ರೌಂಡರಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಲು ಪ್ರಮುಖ ಕಾರಣವಾಗಿದೆ.
ಉತ್ತಮ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 407 ಅಂಕಗಳಿಸಿರುವ ವೆಸ್ಟ್‌ ಇಂಡೀಸ್‌ನ ಜೇಸನ್ ಹೋಲ್ಡರ್ ಮೊದಲ ಸ್ಥಾನದಲ್ಲಿದ್ದರೆ ಐದನೇ ಸ್ಥಾನದಲ್ಲಿರುವ ಅಶ್ವಿನ್ 336 ಅಂಕ ಹೊಂದಿದ್ದಾರೆ. 403 ಅಂಕಗಳೊಂದಿಗೆ ರವೀಂದ್ರ ಜಡೇಜಾ ಎರಡನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ

307 ಅಂಕಗಳಿಸಿರುಬ ಇಗ್ಲೆಂಡ್‌ನ ಬೆನ್ ಸ್ಡೋಕ್ ಮೂರು ಹಾಗೂ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 352 ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಉತ್ತಮ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ 804 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ 908 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ 761 ಅಂಕಗಳೊಂದಿಗೆ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಉತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್‌ 919 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 891 ಅಂಕಗಳೊಂದಿಗೆ ಎರಡನೇ ಸ್ಥಾನ ಹಾಗೂ ಐದನೇ ಸ್ಥಾನದಲ್ಲಿರುವ ಕೊಹ್ಲಿ 838 ಅಂಕ ಹೊಂದಿದ್ದಾರೆ.