ಐಸಿಐಸಿಐ ಬ್ಯಾಂಕಿನ ಮೊದಲ ಹಂತದಲ್ಲಿ 25 ಅಭ್ಯರ್ಥಿಗಳ ಆಯ್ಕೆ

ತಾಳಿಕೋಟೆ:ಆ.19: ಪಟ್ಟಣದ ಎಸ್.ಕೆ.ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ರಂದು ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನಾಕೋಶ ಹಾಗೂ ವಾಣಿಜ್ಯ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಐ.ಸಿ.ಐ.ಸಿ.ಐ ಬ್ಯಾಂಕ ಬೆಂಗಳೂರು ಇವರ ಸಹಯೋಗದಲ್ಲಿ ವಿವಿಧ ಹುದ್ದೆಗಳಿಗೆ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

      ಕಾರ್ಯಕ್ರಮದ ಉದ್ಘಾಟಿಸಿದ ವೀ. ವಿ. ಸಂಘದ ಚೇರಮನ್ನರಾದ ವ್ಹಿ.ಸಿ. ಹಿರೇಮಠರ ಅವರು ಬ್ಯಾಂಕುಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಕಲ್ಪಸಿಕೊಡಬೇಕೆಂದು ಹೇಳಿದರು.
      ಕಾರ್ಯಕ್ರಮದ ಅಥಿತಿಗಳಾದ ಐ.ಸಿ.ಐ.ಸಿ.ಐ ಬ್ಯಾಂಕ ಬೆಂಗಳೂರು ಮಾನವ ಸಂಪನ್ಮೂಲ ನೇಮಕಾತಿ ಅಧಿಕಾರಿ ಶಿವಕುಮಾರ ಅವರು ನೇಮಕಾತಿ ಪ್ರಕ್ರೀಯೆ ಬಗ್ಗೆ ಅಭ್ಯರ್ಥಿಗಳಿಗೆ ತಿಳಿಸಿದರಲ್ಲದೇ ಮೂರು ಹಂತಗಳಲ್ಲಿ ನೇಮಕಾತಿ ಪ್ರಕ್ರೀಯೆಯನ್ನು ಪೂರ್ಣಗೊಳಿಸಿದರು.
       ಈ ಶಿಬಿರದಲ್ಲಿ 104 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ಮೊದಲ ಹಂತದಲ್ಲಿ 25 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಪರಿಗಣಿಸಲಾಯಿತು.
     ಮಹಾವಿದ್ಯಾಲಯದ ಪ್ರಾಚಾರ್ಯರಾದ ಆರ್. ವಿ. ಜಾಲವಾದಿಯವರು ಅಧ್ಯಕ್ಷತೆ ವಹಿಸಿದ್ದರು.

ನೊಂದಣಿ ಪ್ರಕ್ರೀಯೆಯನ್ನು ಶ್ರೀಮತಿ ಪ್ರೇಮಾ ಪಾಟೀಲ ಇಂಗ್ಲಿಷ ಉಪನ್ಯಾಸಕರು ನೇರವೆರಿಸಿದರು

      ಸಹಾಯಕ ಪ್ರಾಧ್ಯಾಪಕ ರಮೇಶ ಜಾಧವ ಸ್ವಾಗತಿಸಿದರು, ಮಹಾವಿದ್ಯಾಲಯದ ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನಾಕೋಶದ ಸಂಚಾಲಕರಾದ ಕುಮಾರಿ. ಸ್ನೇಹಾ ನಾವದಗಿಯವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಈರಮ್ಮ ಲಕ್ಕಪ್ಪಗೋಳ್ ವಂದಿಸಿದರು.