ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು

ನವದೆಹಲಿ, ಏ. ೨೦- ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಎಸ್‌ಇ ೧೦ನೇ ತರಗತಿ ಪರೀಕ್ಷೆಗಳನ್ನು ರ ದ್ದು ಮಾಡಿದ್ದು, ೧೨ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ.
೧೦ ಮತ್ತು ೧೨ನೇ ತರಗತಿಯ ಪರೀಕ್ಷೆ ಸಂಬಂಧ ಐಸಿಎಸ್‌ಇ ಇಂದು ಪ್ರಕಟಣೆ ಹೊರಡಿಸಿದ್ದು, ಐಸಿಎಸ್‌ಇಯ ೧೦ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಹೇಳಿದೆ.
೧೨ನೇ ತರಗತಿಯ ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕೊರೊನಾ ಸೋಂಕು ಹೆಚ್ಚಿರುವ ಸಿಬಿಎಸ್‌ಸಿ ಈಗಾಗಲೇ ೧೦ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ ೧೨ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. ಈಗ ಐಸಿಎಸ್‌ಇಯೂ ಸಹ ಸಿಬಿಎಸ್‌ಸಿಯ ನಡೆಯನ್ನೇ ಪಾಲಿಸಿದೆ.