ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಅನುಷ್ಕಾ ಬಿ.ಕೆ. ರಾಷ್ಟ್ರಕ್ಕೆ ಮೂರನೇ ಸ್ಥಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ :ಜು,21- ನಗರದ ವಿದ್ಯಾರ್ಥಿನಿ ಅನುಷ್ಕ ಬಿ.ಕೆ. ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಮೂರನೇ ಸ್ಥಾನ ರಾಜ್ಯದಲ್ಲಿ ಎರಡನೆ ಸ್ಥಾನ ಪಡೆದು ಜಿಲ್ಲೆಯ, ಪಾಲಕರ ಕೀರ್ತಿ ಹೆಚ್ಚಿಸಿದ್ದಾರೆ.
2021-22ನೇ ಸಾಲಿನ ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿನ ಹೆಸರಾಂತ ವೈದ್ಯ ಡಾ.ಬಿ.ಕೆ.ಸುಂದರ್, ಡಾ.ಅನುಪಮಾ ಬಿ.ಕೆ.ಅವರ ಪುತ್ರಿ ಅನುಷ್ಕಾ ಬಿ.ಕೆ. 500ಕ್ಕೆ 497 ಅಂಕಗಳನ್ನು ಪಡೆದಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಈ ವಿದ್ಯಾರ್ಥಿನಿ ಸಾಧನೆ ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಗಣಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.