ಐಸಿಎಸ್‌ಇಯಲ್ಲಿ ನಂದಿನಿ ಶಾಲೆಗೆ ಶೇ.೧೦೦ ರಷ್ಟು ಫಲಿತಾಂಶ

ವಿಜಯಪುರ, ಮೇ ೮: ನಂದಿನಿ ವಿದ್ಯಾನಿಕೇತನ ಶಾಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ನಡೆದ ೧೦ನೇ ತರಗತಿಯ ಐಸಿಎಸ್‌ಇ ಪರೀಕ್ಷೆಯಲ್ಲಿ ಸತತ ೧೭ನೇ ಬಾರಿಗೆ ಶೇ.೧೦೦ ರಷ್ಟು ಫಲಿತಾಂಶ ಪಡೆದಿದೆ.
ಶಾಲೆಯ ವಿದ್ಯಾರ್ಥಿಗಳಾದ ರೋಹನ್ .ಎಸ್(೯೫.೬೦%), ಕೀರ್ತಿ .ಬಿ.ಎಸ್(೯೪.೦೦%), ಮೊಹಮ್ಮದ್ ಅರ್‍ಸಲಾನ್(೯೩.೮೦%), ರೋಹಿತ .ಟಿ.ವಿ(೯೩.೮೦%), ಧನ್ಯಶ್ರೀ .ಎಂ(೯೩.೪೦%), ರಿಷಿತಾ ನಾರಾಯಣ್ .ಬಿ.ಟಿ(೯೩.೪೦%), ಕವನ .ಎಂ(೯೨.೮೦%), ನಿತಿನ್ .ವೈ.ಎಂ(೯೨.೨೦%), ಸಿಂಚನ .ಸಿ(೯೨.೦೦%), ಬಬಿತ .ಎಸ್(೯೧.೦೦%) ಇವರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಒಟ್ಟು ೬೩ ವಿದ್ಯಾರ್ಥಿಗಳಲ್ಲಿ ೨೬ ಅತ್ಯುತ್ತಮ ಶ್ರೇಣಿಯಲ್ಲಿ, ೩೨ ಪ್ರಥಮ ಶ್ರೇಣಿಯಲ್ಲಿ ಮತ್ತು ೫ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆಂದು ಪ್ರಾಂಶುಪಾಲರಾದ ಪಿ.ಆರ್. ಕೃಷ್ಣನ್ ಕೌಶಿಕ್‌ರವರು ತಿಳಿಸಿರುತ್ತಾರೆ. ಉತ್ತಮ ಫಲಿತಾಂಶ ತಂದು ಕೊಟ್ಟು, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಪ್ರಾಂಶುಪಾಲರಿಗೆ, ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಚೇತನ್‌ಗೌಡರವರು ಹಾಗೂ ಖಜಾಂಚಿಗಳಾದ ಚೈತ್ರ ಚೇತನ್‌ರವರು ಅಭಿನಂದನೆ ಸಲ್ಲಿಸಿರುತ್ತಾರೆ.