ಐವಿ ಡ್ರಿಪ್ಸ್‌ನೊಂದಿಗೆ ಶಾರುಖ್ ಕಣ್ತುಂಬಿಕೊಂಡ ರೋಗಿಗಳು

ನವದೆಹಲಿ,ಮಾ.೨೭-ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ನೃತ್ಯ ಸಂಯೋಜಕಿ-ನಿರ್ದೇಶಕಿ ಫರಾ ಖಾನ್ ನಡುವಿನ ಸ್ನೇಹವು ಉದ್ಯಮದಲ್ಲಿ ಹಲವು ವರ್ಷಗಳ ಹಿಂದಿನದು. ಇವರಿಬ್ಬರೂ ಮೊದಲು ಭೇಟಿಯಾದದ್ದು ೩೦ ವರ್ಷಗಳ ಹಿಂದೆ, ಕಭಿ ಹಾನ್ ಕಭಿ ನಾ ಚಿತ್ರದ ಸೆಟ್‌ನಲ್ಲಿ
ಈ ಆತ್ಮೀಯತೆ ಈಗಲೂ ಇದೆ.ಪ್ರತಿಯೊಂದು ಸುಖ ದುಃಖದಲ್ಲೂ ಇಬ್ಬರೂ ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲುತ್ತಾರೆ. ಏತನ್ಮಧ್ಯೆ, ಈಗ ಫರಾ ಖಾನ್ ಶಾರುಖ್ ಬಗ್ಗೆ ಹಳೆಯ ಮತ್ತು ತಮಾಷೆಯ ಘಟನೆಯನ್ನು ಹಂಚಿಕೊಂಡಿದ್ದಾರೆ.
ಫರಾ ಖಾನ್ ಸಂದರ್ಶನದಲ್ಲಿ ಗರ್ಭಧಾರಣೆ, ಐವಿಎಫ್ ತಂತ್ರಜ್ಞಾನ ಮತ್ತು ತನ್ನ ಮೂರು ಮಕ್ಕಳ ಹೆರಿಗೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
೧೫ ವರ್ಷಗಳ ಹಿಂದೆ ನನ್ನ ಹೆರಿಗೆ ಆಗುತ್ತಿದ್ದಾಗ ರೂಮಿನಲ್ಲಿ ೩೫ ಜನ ಇದ್ದರು ಎಂಬ ವಿಚಾರ ಹಂಚಿಕೊಂಡಿದ್ದಾರೆ.
ಆಕೆಯ ಹೆರಿಗೆಯ ನಂತರ ಶಾರುಖ್ ತನ್ನನ್ನು ಭೇಟಿಯಾಗಲು ಬಂದಾಗ ಫರಾ ಖಾನ್ ತನ್ನ ಗರ್ಭಾವಸ್ಥೆಯ ಕಥೆಯನ್ನು ವಿವರಿಸಿದರು.
ಶಾರುಖ್ ಅವರನ್ನು ನೋಡಲು ಆಸ್ಪತ್ರೆಯಲ್ಲಿ ನೂಕುನುಗ್ಗಲು ಉಂಟಾಯಿತು, ರೋಗಿಗಳು ಕೂಡ ತಮ್ಮ ಹಾಸಿಗೆಯಿಂದ ಎದ್ದು ಹೊರಗೆ ಬಂದರು.
ಆಸ್ಪತ್ರೆಯ ರೋಗಿಗಳು ಐವಿ ಡ್ರಿಪ್ಸ್‌ನೊಂದಿಗೆ ಶಾರುಖ್ ಖಾನ್ ಅವರನ್ನು ನೋಡಲು ಓಡಿ ಬಂದರು.
ಆಗ ಅಲ್ಲಿ ಕಾಲ್ತುಳಿತ ಸಂಭವಿಸಿದೆ ಎಂಬ ವಿಷಯ ಬಹಿರಂಗಪಡಿಸಿದ್ದಾರೆ.
ಗರ್ಭ ಧರಿಸಲು ಸಾಧ್ಯವಾಗದೆ ಶಾರುಖ್ ಮುಂದೆ ಅಳಲು ತೋಡಿಕೊಂಡ ಘಟನೆಯನ್ನೂ ಫರಾ ವಿವರಿಸಿದ್ದಾರೆ.
ಫರಾ ಡಿಸೆಂಬರ್ ೨೦೦೪ ರಲ್ಲಿ ಶಿರಿಶ್ ಕುಂದರ್ ಅವರನ್ನು ವಿವಾಹವಾಗಿದ್ದಾರೆ.ಅವರು ೨೦೦೮ ರಲ್ಲಿ ವಿಟ್ರೊ ಫಲೀಕರಣದ ಮೂಲಕ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಫರಾ ’ಮೈ ಹೂ ನಾ (೨೦೦೪)’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಶಾರುಖ್ ಖಾನ್, ಸುಶ್ಮಿತಾ ಸೇನ್, ಸುನಿಲ್ ಶೆಟ್ಟಿ, ಅಮೃತಾ ರಾವ್ ಮತ್ತು ಜಾಯೆದ್ ಖಾನ್ ಪ್ರಮುಖ ಪಾತ್ರಗಳಲ್ಲಿದ್ದರು. ಅವರು ’ಓಂ ಶಾಂತಿ ಓಂ’ (೨೦೦೭) ಮತ್ತು ’ಹ್ಯಾಪಿ ನ್ಯೂ ಇಯರ್’ (೨೦೧೪) ಚಿತ್ರಗಳನ್ನು ಶಾರುಖ್ ಅವರಿಗಾಗಿ ನಿರ್ದೇಶಿಸಿದ್ದಾರೆ.