ಐವಿಎಫ್ ಚಿಕಿತ್ಸೆ ಬೆಂಬಲಕ್ಕೆ ನಿಂತ ಟ್ರಂಪ್

ಅಲಬಾಮಾ, ಫೆ.೨೪- ಭ್ರೂಣಗಳು ಮಕ್ಕಳಂತೆಯೇ ಎಲ್ಲಾ ಹಕ್ಕುಗಳನ್ನು ಹೊಂದಿದ್ದು, ಹಾಗಾಗಿ ಅವುಗಳನ್ನು ನಾಶ ಮಾಡುವ ಜನರನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ಅಲಬಾಮಾ ರಾಜ್ಯದ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕನಿಷ್ಠ ಮೂರು ಐವಿಎಫ್ ಕ್ಲೀನಿಕ್‌ಗಳು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು.
ನಾವು ತಾಯಿ ಮತ್ತು ತಂದೆಗೆ ಮಕ್ಕಳನ್ನು ಹೊಂದಲು ಸುಲಭವಾಗುವಂತೆ ಮಾಡಲು ಬಯಸುತ್ತೇವೆ. ಅಮೆರಿಕಾದ ಪ್ರತಿ ರಾಜ್ಯದಲ್ಲಿ ಐವಿಎಫ್‌ನಂಥ ಫಲವತ್ತತೆ ಚಿಕಿತ್ಸೆಗಳ ಲಭ್ಯತೆಯನ್ನು ಬೆಂಬಲಿಸುವುದು ಇದರಲ್ಲಿ ಸೇರಿದೆ. ರಿಪಬ್ಲಿಕನ್ನರು, ಸಂಪ್ರದಾಯವಾದಿಗಳು, ಕ್ರಿಶ್ಚಿಯನ್ನರು ಮತ್ತು ಪ್ರೊ-ಲೈಫ್ ಅಮೆರಿಕನ್ನರ ಬಹುಸಂಖ್ಯಾತರ ಹಾಗೆ ಅಮೂಲ್ಯವಾದ ಮಗುವನ್ನು ಹೊಂದಲು ಪ್ರಯತ್ನಿಸುತ್ತಿರುವ ದಂಪತಿಗಳಿಗೆ ಐವಿಎಫ್ ಲಭ್ಯತೆಯನ್ನು ನಾನು ಕೂಡ ಬಲವಾಗಿ ಬೆಂಬಲಿಸುತ್ತೇನೆ. ಹಾಗಾಗಿ ಈ ವಿಚಾರದಲ್ಲಿ ಅಲಬಾಮಾ ಹೈಕೋರ್ಟ್ ತಕ್ಷಣದ ಪರಿಹಾರ ಕೈಗೊಳ್ಳಬೇಕಿದೆ ಎಂದು ಟ್ರಂಪ್ ತನ್ನ ಸಾಮಾಜಿಕ ಜಾಲತಾಣ ?ಟ್ರುಥ್?ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಿಪಬ್ಲಿಕನ್ ಆಗಿರುವ ಅಲಬಾಮಾ ಹೈಕೋರ್ಟ್‌ನ ಅಟಾರ್ನಿ ಜನರಲ್ ಸ್ಟೀವ್ ಮಾರ್ಶಲ್ ಅವರ ತೀರ್ಪಿನಿಂದ ಮಹಿಳಾ ಮತದಾರರು ಈ ಬಾರಿ ರಿಪಬ್ಲಿಕನ್ ಪಕ್ಷಕ್ಕೆ ಮತ ನೀಡುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮತಗಳು ಕಡಿತಗೊಳ್ಳುವ ಭಯದಿಂದ ಇದೀಗ ಟ್ರಂಪ್ ಅವರು ಕೋರ್ಟ್ ತೀರ್ಪಿನ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ತೀರ್ಪಿನ ವಿರುದ್ಧ ಡೆಮಾಕ್ರಟಿಕ್ ಪಕ್ಷ ಈಗಾಗಲೇ ಮುಗಿಬಿದ್ದು, ಆಕ್ರೋಶ ಹೊರಹಾಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿವಾದವನ್ನು ಸುಖಾಂತ್ಯಗೊಳಿಸಲು ಟ್ರಂಪ್ ಬಯಸಿದ್ದಾರೆ ಎನ್ನಲಾಗಿದೆ. ?ಫಲವಂತಿಕೆಯ ಚಿಕಿತ್ಸೆಗಳಿಗೆ ಪ್ರವೇಶವನ್ನು ನಿರ್ಬಂಧಿಸುವ ಪ್ರಯತ್ನಗಳನ್ನು ಬೆಂಬಲಿಸುವ ಶೂನ್ಯ ರಿಪಬ್ಲಿಕನ್ ಸೆನೆಟ್ ಅಭ್ಯರ್ಥಿಗಳು ಇದ್ದಾರೆ ಎಂದು ರಾಷ್ಟ್ರೀಯ ರಿಪಬ್ಲಿಕನ್ ಸೆನೆಟ್ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ, ಜೇಸನ್ ಥೀಲ್ಮನ್ ತಿಳಿಸಿದ್ದಾರೆ.