ಐವರ್ನಾಡು ಸೊಸೈಟಿಯಿಂದ ತರಕಾರಿ ಖರೀದಿ-ಮಾರಾಟಕ್ಕೆ ನಿರ್ಧಾರ ತಾಲೂಕಿನಲ್ಲಿ ಮೊದಲ ಬಾರಿ ಯಶಸ್ವಿಯಾದ ಪರಿಕಲ್ಪನೆ


ಸುಳ್ಯ, ಮೇ ೨೯- ಲಾಕ್ ಡೌನ್ ಕಾರಣ ಊರವರು ಬೆಳೆದ ತರಕಾರಿಗಳನ್ನು ಖರೀದಿಸಿ, ಹೆಚ್ಚುವರಿಯಾಗಿ ಬಯಲು ಸೀಮೆಯಿಂದ ತರಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಪರಿಕಲ್ಪನೆಯನ್ನು ಸುಳ್ಯದ ಐವರ್ನಾಡು ಸಹಕಾರಿ ಸಂಘ ಜಾರಿಗೆ ತಂದಿದೆ.
ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಐವರ್ನಾಡು ಸೊಸೈಟಿ ಪ್ರಾರಂಭಿಸಿದ ಪ್ರಯತ್ನ ಇದು. ಊರಿನಲ್ಲಿ ಬೆಳೆದ ತರಕಾರಿ ಮಾರಾಟ ಮತ್ತು ಖರೀದಿಗೆ ಬೆಳ್ಳಾರೆ ಅಥವಾ ಸುಳ್ಯ ಪೇಟೆಯನ್ನು ನಂಬಿದ್ದರು.. ಲಾಕ್ ಡೌನ್ ಆರಂಭಗೊಂಡಾಗ ಸೊಸೈಟಿ ಊರಿನಲ್ಲಿ ಬೆಳೆದ ತರಕಾರಿಗಳನ್ನು ಖರೀದಿಸಲು ಮುಂದಾದರು. ಇದರ ಜೊತೆಗೆ ಬಯಲು ಸೀಮೆಯಿಂದ ತರಕಾರಿಗಳನ್ನು ಮಾರಾಟ ಮಾಡಲು ಆರಂಭಿಸಿದರು. ಸಹಕಾರಿ ಸಂಘದ ವಠಾರವೇ ಇದಕ್ಕೆ ಸ್ಥಳ. ಈ ಭಾರಿಯೂ ಇದು ಯಶಸ್ವಿಯಾಗಿ ನಡೆಯುತ್ತಿದೆ.
ಜನರು ಮನೆಯಿಂದ ಹೊರಬರುವ ಸಂಕಷ್ಟವನ್ನು ತಪ್ಪಿಸುವ ಉದ್ದೇಶದಿಂದ ಆರಂಭದಲ್ಲಿ ಪಿಕಪ್ ವಾಹನದಲ್ಲಿ ಮನೆ ಮನೆಗೆ ತೆರಳಿ ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಈ ಜನರೇ ಸೋಸೈಟಿಗೆ ಬಂದು ವ್ಯವಹಾರ ನಡೆಸಿ ತೆರಳುತ್ತಾರೆ.
ಕಳೆದ ವರ್ಷ ಲಾಕ್ ಡೌನ್ ಬಳಿಕವೂ ಈ ಯೋಜನೆ ಮುಂದುವರಿದಿತ್ತು. ಪ್ರಸ್ತುತ ದಿನಂಪ್ರತಿ ಇಲ್ಲಿ ೫ ಸಾವಿರಕ್ಕೂ ಅಧಿಕಾರ ವ್ಯಾಪಾರ ನಡೆಯುತ್ತಿದೆ. ಕಡಿಮೆ ದರದಲ್ಲಿ ಉತ್ತಮ ತರಕಾರಿ ದೊರೆಯುತ್ತದೆ. ಮಾರಾಟ ಮತ್ತು ಖರೀದಿಗಾಗಿ ಓರ್ವ ಸಿಬ್ಬಂಧಿಯನ್ನು ನೇಮಿಸಿಕೊಳ್ಳಲಾಗಿದೆ.

ಲಾಕ್ ಡೌನ್‌ನಿಂಧ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತರಕಾರಿ ಬೆಳೆದವರಿಗೆ ನಷ್ಟ ಉಂಟಾಗುತ್ತಿರುವುದನ್ನು ಹಾಗೂ ತರಕಾರಿ ಖರೀದಿಗೆ ಜನರು ಪೇಟೆಗೆ ಹೋಗಬೇಕಾದ ಅನಿವಾರ್ಯತೆಯನ್ನು ಮನಗಂಡು ಸ್ವತಃ ಸಹಕಾರಿ ಸಂಘವೇ ಮುಂದೆ ಬಂದು ಖರೀದಿ ಮತ್ತು ಮಾರಾಟವನ್ನು ಆರಂಭಿಸಿತು. ತಾಲೂಕಿನಲ್ಲಿ ಮೊದಲ ಬಾರಿಗೆ ಈ ಪರಿಕಲ್ಪನೆ ಯಶಸ್ವಿಯಾಗಿದೆ.
ಎಸ್.ಎನ್.ಮನ್ಮಥ
ಅಧ್ಯಕ್ಷರು ಐವರ್ನಾಡು ಸಹಕಾರ ಸಂಘ