ಐವರ್ನಾಡು ಸೊಸೈಟಿಯಲ್ಲಿ ಸಮಗ್ರ ಸುಸ್ಥಿರ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

ಸುಳ್ಯ, ಮಾ.೨೩- ತಾಂತ್ರಿಕತೆಯೊಂದಿಗೆ ಕೃಷಿ ಮಾಡುವ ಮೂಲಕ ಪರಿಸರ ಸಂರಕ್ಷಣೆ ಕೂಡ ಒಟ್ಟೊಟ್ಟಿU ನಡೆಯಬೇಕು ಎಂದು ಖ್ಯಾತ ಸಾವಯವ ಕೃಷಿ ತಜ್ಞ ಡಾ. ಹುಲ್ಲುನಾಚೆ ಗೌಡ ಹೇಳಿದರು.
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸೋಮವಾರ ನಡೆದ ಸಮಗ್ರ ಸುಸ್ಥಿರ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಹಿತಿ ಕಾರ್ಯಗಾರವನ್ನು ಐವರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಉದ್ಘಾಟಿಸಿ ಶುಭಹಾರೈಸಿದರು. ಜಿ.ಪಂ ಸದಸ್ಯ ಎಸ್.ಎನ್ ಮನ್ಮಥ ಅಧ್ಯಕ್ಷತೆ ವಹಿಸಿದ್ದರು.
ಒಡಿಯೂರು ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ ರೈ ಉಪಸ್ಥಿತರಿದ್ದರು. ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ಸ್ವಾಗತಿಸಿ, ಅಜಿತ್ ನಿಡುಬೆ ನಿರೂಪಿಸಿದರು.