ಐವರ್ನಾಡು ಮತ್ತು ಅಡ್ಕಾರಿನಲ್ಲಿ ಸ್ಥಬ್ದಗೊಂಡ ಬಿ.ಎಸ್.ಎನ್.ಎಲ್. ಟವರ್-ಗ್ರಾಹಕರಿಂದ ಆಕ್ರೋಶ

ಸುಳ್ಯ , ಮೇ.೧- ಜಾಲ್ಸೂರು ಗ್ರಾಮದ ಅಡ್ಕಾರ್ ಮತ್ತು ಐವರ್ನಾಡು ಗ್ರಾಮದ ಬಿ.ಎಸ್.ಎನ್.ಎಲ್. ಟವರ್ ಕಳೆದ ಕೆಲವು ದಿನಗಳಿಂದ ನೆಟ್ ವರ್ಕ್ ಸಿಗದೇ ಸ್ಥಬ್ದಗೊಂಡಿದ್ದು, ಲಾಕ್ ಡೌನ್ ಸಮಯದಲ್ಲಿ ಲಾಕ್ ಆಗಿದ್ದು, ತುರ್ತು ಅಗತ್ಯ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿದ್ದ ಮೊಬೈಲ್ ನೆಟ್ ವರ್ಕ್ ಸಿಗದೇ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಡ್ಕಾರಿನಲ್ಲಿರುವ ಬಿ.ಎಸ್.ಎನ್. ಎಲ್. ಮೊಬೈಲ್ ಟವರ್ ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ಇಲ್ಲದೇ ಇದ್ದರೆ ಮಾತ್ರ ನೆಟ್ ವರ್ಕ್ ಸಿಗದೇ ಇರುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ವಿದ್ಯುತ್ ಇದ್ದ ಸಂದರ್ಭದಲ್ಲಿಯೂ ನೆಟ್ ವರ್ಕ್ ಸಿಗದೇ ಇರುವುದರಿಂದ ಜನತೆ ಮತ್ತೆ ಹಿಡಿಶಾಪ ಹಾಕುತ್ತಿದ್ದಾರೆ. ಕೊರೊನಾ ಕರ್ಪ್ಯೂ ಹಿನ್ನೆಲೆಯಲ್ಲಿ ಜನತಾ ಲಾಕ್ ಡೌನ್ ಘೋಷಣೆಯಾಗಿದ್ದು, ಜನರು ಮನೆಯಲ್ಲೇ ಇರುವ
ಸಂದರ್ಭದಲ್ಲಿ ಅಗತ್ಯ ತುರ್ತು ಸಂದರ್ಭದಲ್ಲಿ ಫೋನ್
ಕರೆಗೆ ಬೇಕಿದ್ದ ಮೊಬೈಲ್ ನೆಟ್ ವರ್ಕ್ ಸಿಗದೇ ಇರುವುದರಿಂದ
ಜನರಿಗೆ ಬಹಳಷ್ಟು ತೊಂದರೆಯಾಗುವಂತೆ ಆಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಇದರತ್ತ ಶೀಘ್ರ ಗಮನಹರಿಸಿ, ಟವರ್ ಚಾಲನೆಗೊಳ್ಳುವಂತೆ ಮಾಡಬೇಕಾಗಿದೆ.
ಐವರ್ನಾಡು ಗ್ರಾಮದ ಬಿ.ಎಸ್.ಎನ್. ಎಲ್. ಮೊಬೈಲ್ ಟವರ್ ಕಳೆದ ಕೆಲವು ವರ್ಷಗಳಿಂದ
ವಿದ್ಯುತ್ ಇಲ್ಲದೇ ಇದ್ದರೆ ಮಾತ್ರ ನೆಟ್ ವರ್ಕ್ ಸಿಗದೇ ಇರುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಇದ್ದ ಸಂದರ್ಭದಲ್ಲಿಯೂ ನೆಟ್ ವರ್ಕ್ ಸಿಗದೇ ಇರುವುದರಿಂದ ಜನತೆ ಮತ್ತೆ ಹಿಡಿಶಾಪ
ಹಾಕುತ್ತಿದ್ದಾರೆ. ಅಗತ್ಯ ತುರ್ತು ಸಂದರ್ಭದಲ್ಲಿ ಫೋನ್ ಕರೆಗೆ ಬೇಕಿದ್ದ ಮೊಬೈಲ್ ನೆಟ್‌ವರ್ಕ್ ಸಿಗದೇ ಇರುವುದರಿಂದ ಜನರಿಗೆ ಬಹಳಷ್ಟು ತೊಂದರೆಯಾಗುವಂತೆ ಆಗಿದೆ. ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುತ್ತಿರುವವರಿಗೆ ಇದರಿಂದ ತುಂಬಾ ತೊಂದರೆ ಉಂಟಾಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಇದರತ್ತ ಶೀಘ್ರ ಗಮನಹರಿಸಿ, ಟವರ್ ಚಾಲನೆಗೊಳ್ಳುವಂತೆ ಮಾಡಬೇಕಾಗಿದೆ.
ಬಹಳ ಹಿಂದಿನಿಂದಲೂ ಅದೆಷ್ಟೋ ಮಂದಿ ಗ್ರಾಹಕರು ಬಿ.ಎಸ್.ಎನ್.ಎಲ್. ಟವರನ್ನೇ ನೆಚ್ಚಿಕೊಂಡಿದ್ದು, ಬಿ.ಎಸ್.ಎನ್.ಎಲ್. ಇಲಾಖೆಯವರು ಇದರತ್ತ ಗಮನಹರಿಸಿ ಶೀಘ್ರವಾಗಿ ಟವರ್ ದುರಸ್ತಿ ಮಾಡಬೇಕಾಗಿದೆ.