ಐವರ್ನಾಡು: ಬೇಂಗಮಲೆ ಸಿ.ಆರ್.ಸಿ.ಕಾಲೊನಿ ಕಂಟೈನ್ಮೆಂಟ್ ಝೋನ್

ಸುಳ್ಯ , ಜೂ.೧- ಐವರ್ನಾಡು ಗ್ರಾಮದ ಬೇಂಗಮಲೆ ಸಿ.ಆರ್.ಸಿ.ಕಾಲೊನಿಯಲ್ಲಿ ಸೋಮವಾರ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಾಲೊನಿಯಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಯಿತು.
ಸೋಮವಾರ ಬೆಳಿಗ್ಗೆ ಐವರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ,ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕ್ ,ಗ್ರಾ.ಪಂ ಉಪಾಧ್ಯಕ್ಷೆ ಸುಜಾತ ಪವಿತ್ರಮಜಲು, ಸದಸ್ಯ ರಂಜನ್ ಮೂಲೆತೋಟ, ಆರೋಗ್ಯ ಕಾರ್ಯಕರ್ತೆ , ಆಶಾ ಕಾರ್ಯಕರ್ತೆಯರು,ಗ್ರಾ.ಪಂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಕಾಲೊನಿಯಲ್ಲಿ ಜನರಿಗೆ ಮುಂಜಾಗ್ರತಾ ವಹಿಸುವಂತೆ, ಮಾಸ್ಕ್ ಧರಿಸಲು ಸೂಚಿಸಿದರು. ಆರೋಗ್ಯ ಕಾರ್ಯಕರ್ತೆ ಜನರಿಗೆ ಔಷಧಗಳನ್ನು ನೀಡಿದರು. ಪಾಸಿಟಿವ್ ಬಂದ ಮನೆಯವರು ಹೊರಗಡೆ ಬಂದು ತಿರುಗಾಡದಂತೆ ಎಚ್ಚರಿಕೆ ನೀಡಿದರು. ಯಾರಿಗಾದರೂ ಆಹಾರದ ವ್ಯವಸ್ಥೆ ಬೇಕಾದರೆ ಟಾಸ್ಕ್ ಪೋರ್ಸ್ ನವರನ್ನು
ಸಂಪರ್ಕಿಸುವಂತೆ ಸೂಚಿಸಲಾಯಿತು.