ಐವರ್ನಾಡು: ತೋಡಿಗೆ ಬಿದ್ದ ಕಾರು

ಸುಳ್ಯ, ಜೂ.೨- ಐವರ್ನಾಡು ಕೆಳಗಿನ ಪೇಟೆಯ ರಸ್ತೆ ಬದಿ ನಿಲ್ಲಿಸಿದ್ದ ಕಾರು ಗೇರ್ ನ್ಯೂಟ್ರಲ್ ಆಗಿ ತೋಡಿಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ. ಶೇಖರ ಮಡ್ತಿಲರವರು ತನ್ನ ೮೦೦ ಕಾರನ್ನು ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು. ಕಾರಿನ ಗೇರ್ ನ್ಯೂಟ್ರಲ್ ಆಗಿ ಕಾರು ಮುಂದಕ್ಕೆ ಚಲಿಸಿ ಹತ್ತಿದ ಮೋರಿಯಿಂದ ತೋಡಿಗೆ ಬಿದ್ದಿದೆ. ಕಾರಿನ ಎದುರು ಭಾಗ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.