ಐವರ್ನಾಡು ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಂಡಿಂಗ್ ಲೋಕಾರ್ಪಣೆ

ಸುಳ್ಯ, ನ.೩- ಐವರ್ನಾಡು ಗ್ರಾಮ ಪಂಚಾಯತಿಯ ಸ್ವಚ್ಛ ಭಾರತ್ ಮಿಷನ್ ಯೋಜನೆ “ಸ್ವಚ್ಛೋತ್ಸವ – ನಿತ್ಯೋತ್ಸವ “ ಮಾಸಾಚರಣೆ ಪ್ರಯುಕ್ತ ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಡಿಂಗ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ.ಜಿಲ್ಲಾ ಪಂಚಾಯತಿ, ಸುಳ್ಯ ತಾಲೂಕು ಪಂಚಾಯತಿ ಇದರ ಸಹಯೋಗದಲ್ಲಿ ಯೋಜನೆ ಕಾರ್ಯಗತಗೊಂಡಿದ್ದು, ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಂಡಿಂಗ್‌ನ್ನು ಗ್ರಾಮ ಪಂಚಾಂiತಿ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಲೋಕಾರ್ಪಣೆ ಮಾಡಿದರು.
ಸಾರ್ವಜನಿಕ ಶೌಚಾಲಯ ಘಟಕಕ್ಕೆ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ಶಂಕುಸ್ಥಾಪನೆ ನೆರವೇರಿಸಿದರು.
ಸ್ವಚ್ಛ ಸಂಕಿರ್ಣವನ್ನು ಜಿ.ಪಂ ಸದಸ್ಯೆ ಪುಷ್ಪಾವತಿ ಬಾಳಿಲ ಉದ್ಘಾಟಿಸಿದರು. ಸ್ವಚ್ಛತಾ ವಾಹನಕ್ಕೆ ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ ಚಾಲನೆ ನೀಡಿದರು.
ತಾ.ಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎನ್. ಭವಾನಿಶಂಕರ್ ಪ್ರಾಸ್ತಾವಿಕ ಮಾತನಾಡಿದರು. ಉಮೇಶ್ ಮಾಸ್ತರ್ ಪಲ್ಲತ್ತಡ್ಕ ಹಾಗೂ ಪ್ರಸಾದ್ ಕೆಮ್ಮಿಂಜೆಯವರಿಗೆ ಸ್ವಚ್ಛತೆಯ ಬಗ್ಗೆ ನಾಮಫಲಕಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ತಾ.ಪಂ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಪಂಚಾಯತಿ ಆಡಳಿತಾಧಿಕಾರಿ ಶ್ರೀಮತಿ ರಶ್ಮಿ ಕೆ.ಎಂ, ಎಸ್.ಬಿ.ಎಂ.ಘಟಕದ ಜಿ.ಪಂನ ಪವನ್ ಕುಮಾರ್, ಸ್ವಚ್ಛ ಭಾರತ್ ಮಿಷನ್‌ನ ಐ.ಇ.ಸಿ ಸಮಾಲೋಚಕ ಡೊಂಬಯ್ಯ ಇಡ್ಕಿದು ಉಪಸ್ಥಿತರಿದ್ದರು. ಪಿ.ಡಿ.ಒ ಯು.ಡಿ.ಶೇಖರ್ ಸ್ವಾಗತಿಸಿದರು. ರಶ್ಮಿ ಕೆ.ಎಂ.ವಂದಿಸಿದರು. ಸುಬ್ರಹ್ಮಣ್ಯ ಬಾಂಜಿಕೋಡಿ ನಿರೂಪಿಸಿದರು.