ಐವರು ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

ರಾಯಚೂರು,ಏ.೪- ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆಸಿದ ೫ ಜನರಿಗೆ ಮಸ್ಕಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚಿಹ್ನೆಗಳನ್ನು ಹಂಚಿಕೆ ಮಾಡಲಾಯಿತು.
ಪಕ್ಷೇತರ ಅಭ್ಯರ್ಥಿಗಳಾದ ದೀಪಿಕಾ ಎಸ್. ಇವರಿಗೆ ಫೋನ್ ಚಾರ್ಜ್‌ರ್, ಶ್ರೀನಿವಾಸ ನಾಯಕರಿಗೆ ಆಪಲ್, ಅಮರೇಶರಿಗೆ ಫ್ರೇಸರ್ ಕುಕ್ಕರ್, ಈಶಪ್ಪರಿಗೆ ಖಾಲಿಫ್ಲೂರ್ ಮತ್ತು ಬಸನಗೌಡರಿಗೆ ಟ್ಯ್ರಾಕ್ಟರ್ ಚಾಲಿತ ಕಿಶನ್ ಚಿಹ್ನೆ ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾಮಾನ್ಯ ಚುನಾವಣೆ ವೀಕ್ಷಕರಾದ ಶ್ರೀಧರ್ ಬಾಬು ಅಡ್ಡಂಕಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಾದ ಆರ್.ವೆಂಕಟೇಶ ಕುಮಾರ, ಚುನಾವಣಾಧಿಕಾರಿಗಳೂ ಆಗಿರುವ ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಉಪಸ್ಥಿತಿರಿದ್ದರು.