ಐವರು ನಿರ್ದೇಶಕರ ಜೊತೆ ಗುರು ಸಂಗಮ

ಮಲ್ಟಿಸ್ಟಾರ್ ಗಳನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡುವುದನ್ನು ನೋಡಿದ್ದೇವೆ. ಇದೀಗ ಬಹು ನಿರ್ದೇಶಕರನ್ನು ಚಿತ್ರಕ್ಕೆ ಬಳಸಿಕೊಳ್ಳುವ ಪರಿಪಾಠ ಕನ್ನಡದಲ್ಲಿ ಆರಂಭವಾಗಿದೆ.
ನಿರ್ದೇಶಕ ,ನಿರ್ಮಾಪಕ ಗುರುದೇಶಪಾಂಡೆ ಇಂತಹದೊಂದು ಪ್ರಯತ್ನವನ್ನು ಸದ್ದಿಲ್ಲದೆ ಆರಂಭಿಸಿ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಚಿತ್ರಕ್ಕೆ “ಪೆಂಟಗಾನ್” ಎಂದು ಹೆರಿಟ್ಟಿದ್ದಾರೆ.
ಪ್ರತಿಭಾವಂತ ನಿರ್ದೇಶಕರನ್ನು ಹಾಕಿಕೊಂಡು ಕೆಲಸ ಮಾಡುವುದು ಸುಲಭದ ಮಾತಲ್ಲ. ಆದರೂ ಸವಾಲು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಐದು ನಿರ್ದೇಶಕರು ಐದು ಕಥೆಗಳಿರುವ ಪೆಂಟಗನ್ ಚಿತ್ರದ ಎರಡು ಕಥೆಗಳ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಐದು ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ ಎನ್ನುವುದು ಅವರ ವಿವರಣೆ.
ಕತೆಯಿಂದ ಕತೆಗೆ ಬೆಸೆಯುವ ಮತ್ತು ಪಾತ್ರಗಳ ಮೂಲಕ ಕಥೆಯ ಆಶಯವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಪೆಂಟಗನ್ ನೋಡಲು ಸರಳ ಎನಿಸಿದರೂ ಅದು ಐದು ಹಂತಗಳ ಕೇಕ್ ಇದ್ದಂತೆ. 5 ಹಂತದ ಪದರವನ್ನು ವಿಶೇಷವಾಗಿ ಆನಂದಿಸಬಹುದು ಎನ್ನುವ ವಿಶ್ವಾಸ ಗುರುದೇಶಪಾಂಡೆ ಅವರದು.
ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವ ಐವರು ನಿರ್ದೇಶಕರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಜೊತೆಗೆ ಅನುಭವಿಸಿದ್ದಾರೆ. ಅವರ ಹೆಸರುಗಳನ್ನು ಮುಂದಿನ ಹಂತದಲ್ಲಿ ಹಂತಹಂತವಾಗಿ ಅವರು ತಿಳಿಸಿದ್ದಾರೆ. ಜೊತೆಗೆ ಅನುಭವಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು ಎನ್ನುತ್ತಾರೆ ಅವರು