ಐವರು ದರೋಡೆಕೋರರ ಬಂಧನ

ಕಲಬುರಗಿ,ಮಾ 19: ತಾಲೂಕಿನ ಫರತಾಬಾದ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹೆಲ್ಮೆಟ್ ನಿಂದ ಹಲ್ಲೆಮಾಡಿ ಹಣ, ಲ್ಯಾಪ್ಟಾಪ್ ,ಮೊಬೈಲ್ ಹಾಗೂ ಬ್ಯಾಗ್ ಲೂಟಿ ಮಾಡಿದ್ದ ಐವರು ದರೋಡೆಕೋರರನ್ನು ಫರತಾಬಾದ್ ಪೊಲೀಸರುಬಂಧಿಸಿದ್ದಾರೆ. ರಮೇಶ ರಟಕಲ್,ಸೂರ್ಯಕಾಂತ ಜಮಾದಾರ್,ಭವಾನಿಕುಮಾರ ಕಟ್ಟಿಮನಿ,ಶ್ರೀಕಾಂತ ನಾಗೇಂದ್ರ ರಟಕಲ್ ಮತ್ತು ಶ್ರೀಶೈಲ ಗುಂಡಪ್ಪ ಜಮಾದಾರ ಬಂಧಿತರು.
ಈ ಐವರು ಎರಡು ಬೈಕ್ ಗಳ ಮೇಲೆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಬಳ್ಳಾರಿ ಮೂಲದ ಕೆ.ಗಾದಿಲಿಂಗಪ್ಪ ತೆಲಗೂರು ಎಂಬುವವರ ಮೇಲೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು.ಪ್ರಕರಣ ತನಿಖೆಗೆ ಡಿಸಿಪಿ ಅಡೂರು ಶ್ರೀನಿವಾಸಲು,ಐಎ ಚಂದ್ರಪ್ಪ ಗೀತಾ ಬೇನಳ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಫರತಾಬಾದ್ ಠಾಣೆಯ ಪಿಐ ಚಂದ್ರಶೇಖರ ಹಿರೇಮಠ,ಪಿಎಸ್ ಐಗಳಾದ ಸುರೇಶ ರೆಡ್ಡಿ,ಸೈಯದ್ ಪಟೇಲ್ ಹಾಗೂ ಸಿಬ್ಬಂದಿ ದರೋಡೆಕೋರರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣ ತ್ವರಿತವಾಗಿ ಪತ್ತೆ ಹಚ್ಚಿದ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಅವರು ಶ್ಲಾಘಿಸಿದ್ದಾರೆ.