ಐವರಿಗೆ ಹೊನ್ಕಲ್ ಸಾಹಿತ್ಯ ಪ್ರಶಸ್ತಿ

ಶಹಾಪುರ,ನ.25-ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಪ್ರಶಸ್ತಿಗೆ ಐದು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ವಿಶೇಷ ಗೌರವ ಪುರಸ್ಕಾರ ಪ್ರಕಟಿಸಲಾಗಿದೆ.
ಖ್ಯಾತ ಕಥೆಗಾರ ಬಸವಣ್ಣೆಪ್ಪ ಕಂಬಾರ ಬೆಳಗಾಂ ಜಿಲ್ಲೆ ಅವರ “ಆರನೇ ಬೆರಳು” ಕಥಾಸಂಕಲನ, ಖ್ಯಾತ ಲೇಖಕಿ ಮಮತಾ ಅರಸಿಕೆರೆ ಹಾಸನ ಅವರ “ಒಳಗೂ ಹೊರಗೂ”À ಮಹಿಳಾ ಸಂವೇದನೆ ಬರಹಗಳ ಸಂಕಲನ,
ಡಾ.ಶಿವರಾಮ ಅಸುಂಡಿ ಅವರ “ಚಿತ್ರಂ ಭಳಾರೆ ವಿಚಿತ್ರಂ” ಲಲಿತ ಪ್ರಬಂಧ ಸಂಕಲನ, ಖ್ಯಾತ ಲೇಖಕ ಅಬ್ದುಲ್ ಹೈ ತೋರಣಗಲ್ಲು ಬಳ್ಳಾರಿ ಅವರ “ಆತ್ಮ ಧ್ಯಾನದ ನಾದ” ಗಜಲ್ ಸಂಕಲನ, ಹಿರಿಯ ಲೇಖಕ ಸಂಗಮೇಶ ಬಾದವಾಡಿಗಿ ಬೆಂಗಳೂರು ಅವರ “ರೊಟ್ಟಿ ಪಂಚಮಿ” ಕಾವ್ಯ ಸಂಕಲನವನ್ನು ಶ್ರೀ ಹೊನ್ಕಲ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಐದು ಕೃತಿಗಳು ಹಾಗೂ ಈ ಕೃತಿಗಳ ಲೇಖಕರಿಗೆ ಪ್ರಶಸ್ತಿಯ ಜೊತೆಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ,ನೆನಪಿನ ಕಾಣಿಕೆ ಹಾಗೂ ವಿಶೇಷ ಸನ್ಮಾನ ಮಾಡಿ ಗೌರವಿಸಲಾಗುವುದು.
ಇನ್ನೂ ಈ ವರ್ಷದಿಂದ ಅಗಲಿದ ತಾಯಿಯ ಸ್ಮರಣಾರ್ಥ ಆರಂಭಿಸಲಾದ ವಿಶೇಷ ಗೌರವ ಪುರಸ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಹೊಸಮನಿ, ಸರ್ವಜ್ಞ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಚೆನ್ನಾರೆಡ್ಡಿ ಪಾಟೀಲ, ಪ್ರಭುಲಿಂಗ ನೀಲೂರೆ,ಬಿ.ಎಸ್.ನಿರಗುಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಐದು ಜನಮುಖಿ ಸಾಧಕರಿಗೆ ಇದೇ ಸಂದರ್ಭದಲ್ಲಿ ವಿಶೇಷ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಯ್ಕೆ ಸಮಿತಿಯ ಪರವಾಗಿ ಲೇಖಕ ಸಿದ್ಧರಾಮ ಹೊನ್ಕಲ್ ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಡಿಸೆಂಬರ್ 11 ರಂದು ಮುಂಜಾನೆ 10.30ಕ್ಕೆ ಶಹಾಪುರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.