ಐವರಿಗೆ “ವ್ಯೋಮಾವ್ಯೋಮ” ಪ್ರಶಸ್ತಿ

ಕಲಬುರಗಿ,ಮಾ.31-ಬಂಡಾಯ ಸಾಹಿತಿ ಡಾ.ಚನ್ನಣ್ಣ ವಾಲೀಕಾರ ಅವರ ಜನ್ಮದಿನೋತ್ಸವದ ಪ್ರಯುಕ್ತ ಜನಪದ ತಜ್ಞ ಡಾ.ಸ್ವಾಮಿರಾವ ಕುಲಕರ್ಣಿ, ಹೋರಾಟಗಾರತಿ ಡಾ.ಸರಸ್ವತಿ ಚಿಮ್ಮಲಗಿ, ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್, ಲೇಖಕ ಡಾ.ಎಚ್.ಟಿ.ಪೋತೆ ಮತ್ತು ಜಾನಪದ ಗಾಯಕ ಶಂಭುಲಿಂಗ ವಾಲದೊಡ್ಡಿ ಅವರಿಗೆ “ವ್ಯೋಮಾವ್ಯೋಮ” ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅಧ್ಯಕ್ಷತೆಯಲ್ಲಿ, ಡಾ.ಕೆ.ಎಸ್.ಬಂಧು ಸಿದ್ದೇಶ್ವರ, ಸಿದ್ಧಮ್ಮ ವಾಲೀಕಾರ, ಬಸವರಾಜ ಸುಣಗಾರ, ಅಯ್ಯಣ್ಣ ವಾಲೀಕಾರ, ಅರವಿಂದಕುಮಾರ ವಾಲೀಕಾರ ಮತ್ತು ಮನೋಹರ ಮರಗುತ್ತಿ ಉಪಸ್ಥಿತಿಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಡಾ.ಚನ್ನಣ್ಣ ವಾಲೀಕಾರ ಅವರ ಜನ್ಮದಿನೋತ್ಸವ ಅಂಗವಾಗಿ ಏಪ್ರಿಲ್ 6 ರಂದು ನಗರದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಪ್ರಕಾಶನ, ಕವಿರಾಜ ಮಾರ್ಗ ಪ್ರಕಾಶನ ಮತ್ತು ದಲಿತ ಬಂಡಾಯ ಸಾಹಿತ್ಯ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಈ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಸಿದ್ಧಮ್ಮ ವಾಲೀಕಾರ, ಡಾ.ಕೆ.ಎಸ್.ಬಂಧು ಸಿದ್ದೇಶ್ವರ ತಿಳಿಸಿದ್ದಾರೆ.