ನಾಮಪತ್ರ ಸ್ವೀಕಾರಕ್ಕೆ ಸಕಲ ಸಿದ್ಧತೆ
ದೇವದುರ್ಗ,ಏ.೧೩- ವಿಧಾನಸಭೆ ಚುನಾವಣೆಗೆ ಏ.೧೩ರಿಂದ ೨೦ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಆಯೋಗದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏ.೨೧ರಂದು ಪರಿಶೀಲನೆ, ೨೪ರಂದು ವಾಪಸ್ ಪಡೆಯಲು ಕೊನೇದಿನ ಆಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನ್‌ಕುಮಾಋ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಬುಧವಾರ ಮಾತನಾಡಿದರು. ಮೇ ೧೦ರಂದು ಬೆಳಗ್ಗೆ ೭ರಿಂದ ಸಂಜೆ ೬ರವರೆಗೆ ಮತದಾನಕ್ಕೆ ಅವಕಾಶವಿದೆ. ಮತದಾನಕ್ಕೆ ಒಂದು ದಿನ ಮುಂಚೆ ೮೦ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಮನೆಯಲ್ಲೆ ಕುಳಿತು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಂಥ ಮತದಾರರು ಆಯೋಗಕ್ಕೆ ಘೋಷಣೆ ಪತ್ರ ನೀಡಬೇಕು.
ಮನೆಯಲ್ಲಿ ಕುಳಿತ ಮತದಾನ ಮಾಡುವವರಿಗೆ ೧೨ಡಿ ಫಾರಂ ನೀಡಲಾಗಿದ್ದು ತಾಲೂಕಿನಲ್ಲಿ ೮೦ವರ್ಷದ ದಾಟಿದ ೩೨೨೪ ಮತದಾರರು ಹಾಗೂ ೨೨೦೦ಅಂಗವಿಲಕ ವೋಟರ್‍ಸ್‌ಇದ್ದು ಎಲ್ಲರಿಗೂ ಅರ್ಜಿ ನೀಡಲಾಗಿದೆ. ಮನೆಯಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ಮಾಡುವವರು ಏ.೧೭ರ ಒಳಗೆ ಸಂಬಂಧಿದ ಅಧಿಕಾರಿಗಳಿಗೆ ಘೋಷಣೆ ಪತ್ರ ನೀಡಬೇಕು. ಹೀಗಾಗಲೆ ೧೨೫ಅರ್ಜಿಗಳು ಸಲ್ಲಿಕೆಯಾಗಿದ್ದು, ಏ.೧೭ರವರೆಗೆ ಬರುವ ಅರ್ಜಿಗಳನ್ನು ಪರಿಶೀಲಿಸಿ, ಮತದಾನಕ್ಕೆ ತಂಡ ರಚಿಸಲಾಗುವುದು. ಪಿಆರ್‌ಒ, ಎಪಿಆರ್‌ಒ ಅಂಥ ಮತದಾರರಿಗೆ ಮನೆತೆರಳಿ ಮತದಾನ ಮಾಡಿಸಲಿದ್ದಾರೆ ಎಂದರು.
೨೬೫ಮತದಾನ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗಿದ್ದು, ಸಭೆ ಮಾಡಿಕೂಡ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ತಲಾ ಒಂದು ಮಹಿಳೆಯರಿಗಾಗಿ ಪಿಂಕ್‌ಬೂತ್, ವಿಕಲಚೇತನರಿಗೆ ವಿಶೇಷ ಬೂತ್ ಮಾಡಲಾಗುವುದು. ಅಲ್ಲದೆ ಒಂದು ಕೇಂದ್ರದಲ್ಲಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪ್ರದಾಯಿಕ ಉಡುಗೆತೊಡುಗೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗುವುದು.
ಚುನಾವಣೆಗೆ ಸಂಬಂಧಿಸಿದ ದೂರು ನೀಡಲು ೧೯೫೦ ಸಹಾಯವಾಣಿ ತೆರೆಯಲಾಗಿದೆ. ೩೨೪ಪಿಆರ್‌ಒ, ೩೭೯ ಎಪಿಆರ್‌ಒ ಸೇರಿ ೭೦೩ಅಧಿಕಾರಿಗಳನ್ನು ಕರ್ತವ್ಯ ನಿಯೋಜಿಸಲಾಗಿದೆ. ಏ.೧೮ರಂದು ೧೫ತಂಡ ಮಾಡಿ ಮೂವರು ಮಾಸ್ಟರ್ ತರಬೇತುದಾರರಿಂದ ಟ್ರೇನಿಂಗ್ ನೀಡಲಾಗುವುದು. ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ.೧೭, ೧೯ರಂದು ಪರವಾನಿಗೆ ಕೇಳಿದ್ದು, ಮೆರವಣಿಗೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಇದ್ದರು.
ಕೋಟ್====
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ದಾಖಲೆ, ಅಫಿವಿಡೆಟ್ ಅಂದೇ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುವುದು. ಆನ್‌ಲೈನ್ ಆಪ್‌ಮೂಲಕ ಯಾರಾದ್ರೂ ನೋಡಬಹುದು. ಎನ್‌ಕೋಡ್, ಸುವಿದ, ವೋಟರ್‌ಹ್ಯಾಪ್‌ಲೈನ್‌ನಲ್ಲಿ ಅಭ್ಯರ್ಥಿಗಳ ಮಾಹಿತಿ ಪಡೆಯಬಹುದು.
| ಎಂ.ಎನ್.ಚೇತನಕುಮಾರ
ಚುನಾವಣಾಧಿಕಾರಿ