ಐರಾ ಖಾನ್ ಗೆಳೆಯ ನೂಪುರ್ ಅವರೊಂದಿಗೆ ಅಜ್ಜಿಯನ್ನು ಭೇಟಿಯಾದರು, ನೆಟ್ಟಿಗರು ಕೇಳಿದರು – ಯಾವಾಗ ಮದುವೆ?

ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಪುತ್ರಿ ಇರಾ (ಐರಾ)ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಐರಾ ಖಾನ್ ಗೆಳೆಯ ನೂಪುರ್ ಶಿಖರೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ, ಐರಾ ಅವರು ನೂಪುರ್ ಶಿಖರೆ ಅವರೊಂದಿಗೆ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.ಅದರಲ್ಲಿ ಅವರು ವಿಶೇಷ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಐರಾ ತನ್ನ ಅಜ್ಜಿ ಜೀನತ್ ಹುಸೇನ್ ಜೊತೆ ಕಾಣಿಸಿಕೊಂಡಿದ್ದಾರೆ. ಅಮೀರ್ ಮಗಳು ತನ್ನ ಅಜ್ಜಿಯ ಬಳಿಗೆ ತನ್ನ ಗೆಳೆಯನನ್ನು ಭೇಟಿಯಾಗಿಸಲು ಕರೆದೊಯ್ದರು.
ಅದನ್ನು ಗಮನಿಸಿ “ಇಬ್ಬರೂ ಮದುವೆಯಾಗಲಿದ್ದಾರೆಯೇ?” ಎಂದು ನೆಟ್ಟಿಗರು ಕೇಳುತ್ತಿದ್ದಾರೆ? ಐರಾ ತನ್ನ ಗೆಳೆಯ ನೂಪುರ್ ರನ್ನು ಅಜ್ಜಿ ಜೀನತ್ ಹುಸೇನ್ (ಅಮೀರ್ ತಾಯಿ) ಅವರಿಗೆ ಪರಿಚಯಿಸಿದ ಫೋಟೋ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಐರಾ, ’ರ?ಯಾಂಡಮ್ ಫೋಟೋ ಬಾಂಬ್‌ಗಳು’ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಐರಾ, ನೂಪುರ್ ಮತ್ತು ಜೀನತ್ ಮೂವರೂ ನಗುತ್ತಾ ಪೋಸ್ ಕೊಡುತ್ತಾ ಫೋಟೋವನ್ನು ಕ್ಲಿಕ್ಕಿಸುತ್ತಿದ್ದಾರೆ. ಈ ಬಗ್ಗೆ ಅಭಿಮಾನಿಯೊಬ್ಬರು, ’ಏನು ಸಂತೋಷದ ಚಿತ್ರ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, ’ನೀವಿಬ್ಬರೂ ಮದುವೆಯಾಗಲಿದ್ದೀರಾ?’ ಎಂದು ಕೇಳಿದರೆ, ಐರಾ ಮತ್ತು ನೂಪುರ್ ಒಬ್ಬರಿಗೊಬ್ಬರು ಆತ್ಮೀಯರಾಗಿರುವ ರೀತಿಯನ್ನು ಹೇಳುತ್ತಾರೆ.ಹಬ್ಬದ ಸಂದರ್ಭದಲ್ಲಿ ಐರಾ -ನೂಪುರ್ ಮತ್ತು ಅವರ ಕುಟುಂಬದೊಂದಿಗೆ ಆಚರಣೆಗಳಲ್ಲಿ ಸೇರಿಕೊಳ್ಳುತ್ತಿದ್ದಾರೆ. ನೂಪುರ್ ಶಿಖರ್ ಫಿಟ್‌ನೆಸ್ ತರಬೇತುದಾರ , ಅವರು ಐರಾ ಖಾನ್‌ಗೆ ಸ್ವಲ್ಪ ಸಮಯದಿಂದ ತರಬೇತಿ ನೀಡುತ್ತಿದ್ದಾರೆ. ಪೋಸ್ಟ್‌ನಲ್ಲಿ, ಐರಾ ಅವರು ನೂಪುರ್ ಅವರೊಂದಿಗೆ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಸವಿಯುತ್ತಿರುವುದಾಗಿ ಹೇಳಿದ್ದಾರೆ. ಐರಾ ಅವರ ತಂದೆ ಮತ್ತು ನಟ ಅಮೀರ್ ಖಾನ್ ಅವರ ಫಿಟ್ನೆಸ್ ತರಬೇತುದಾರರೂ ನೂಪುರ್ ಅವರೇ ಆಗಿದ್ದಾರೆ ಎಂದು ಹೇಳಲಾಗುತ್ತದೆ. ಲಾಕ್‌ಡೌನ್ ಸಮಯದಲ್ಲಿ ಐರಾ ಮತ್ತು ನೂಪುರ್ ಡೇಟಿಂಗ್ ಪ್ರಾರಂಭಿಸಿದರು, ಚಲನಚಿತ್ರಗಳಲ್ಲಿ ಪಾದಾರ್ಪಣೆ ಮಾಡುವ ಮೊದಲು, ಸ್ಟಾರ್‌ಕಿಡ್ ತನ್ನ ಫಿಟ್‌ನೆಸ್ ನ್ನು ನೋಡಿಕೊಳ್ಳಲು ನೂಪುರ್ ಅವರನ್ನು ತರಬೇತುದಾರರಾಗಿ ನೇಮಿಸಿಕೊಂಡಿದ್ದರು.

ಕರಣ್ ಜೋಹರ್ ಅವರ ಚಾಟ್ ಶೋಗೆ ಪ್ರವೇಶಿಸಲು ಅಕ್ಷಯ್ ಸಮಂತಾರನ್ನು ತೋಳುಗಳಲ್ಲಿ ಎತ್ತಿಕೊಂಡರು

ಕರಣ್ ಜೋಹರ್ ಅವರ ಜನಪ್ರಿಯ ಚಾಟ್ ಶೋ ’ಕಾಫಿ ವಿದ್ ಕರಣ್- ೭’ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ನಡುವೆ, ಕರಣ್ ತಮ್ಮ ಮೂರನೇ ಸಂಚಿಕೆಯ ಪ್ರೊಮೊ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಮೂರನೇ ಸಂಚಿಕೆಯಲ್ಲಿ ಅಕ್ಷಯ್ ಕುಮಾರ್ ಎದುರು ಸಮಂತಾ ರುತ್ ಪ್ರಭು ಕಾಣಿಸಿಕೊಳ್ಳಲಿದ್ದಾರೆ.


ಚಾಟ್ ಶೋಗೆ ಪ್ರವೇಶಿಸುವ ಮೊದಲು ಸಮಂತಾ ರುತ್ ಪ್ರಭು ಅವರನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅಕ್ಷಯ್ ಕುಮಾರ್ ಶೋನಲ್ಲಿ ಆಗಮಿಸಿದ್ದಾರೆ. ಈ ಸಂಚಿಕೆಯಲ್ಲಿ ಅಕ್ಷಯ್ ಕುಮಾರ್, ಕರಣ್ ಜೋಹರ್ ಮತ್ತು ಸಮಂತಾ ಸಾಕಷ್ಟು ಮೋಜು ಮಾಡಿರುವುದು ಕಂಡುಬಂದಿದೆ.