ಐರಣಿ ಮುಪ್ಪಿನಾರ್ಯ ಶ್ರೀಗಳ ಪುತ್ಥಳಿ ಮೆರವಣಿಗೆ 

ಹರಿಹರ.ನ.೧೩; ನಗರದ ಎ.ಕೆ.ಕಾಲೋನಿಯ ಪುರಪ್ರವೇಶಿಸುತ್ತಿರುವ ಐರಣಿ ಹೊಳೆಮಠದ ಮುಪ್ಪಿನಾರ್ಯ ಶ್ರೀಗಳ ಅಮೃತಶಿಲೆಯ ಪುತ್ಥಳಿಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು. ನಗರದ ಪರಿಶಿಷ್ಟರ ಕಾಲೊನಿಯಿಂದ ಮೆರವಣಿಗೆಯು ಚಾಲನೆಗೊಂಡಿತು.  ಮಹಾತ್ಮಗಾಂಧಿ ವೃತ್ತ ರಾಣಿ ಚನ್ನಮ್ಮ ವೃತ್ತ ಶಿವಮೊಗ್ಗ ರಸ್ತೆಯ ಮೂಲಕ ಐರಣಿ ಹೂಳೆ ಶಾಖಾ ಮಠಕ್ಕೆ ತಲುಪಿತು.ನಂತರ  ಧಾರ್ಮಿಕ ಸಭೆ ಸಾಮೂಹಿಕ ವಿವಾಹಗಳು ನಡೆದವು