ಐರಣಿಶಾಖಾ ಮಠದಲ್ಲಿ ಅಮೃತಶಿಲಾಮೂರ್ತಿ ಪ್ರತಿಷ್ಠಾಪನೆ

ಹರಿಹರ.ನ.೨೫; ನಗರದ ಐರಣಿ ಶಾಖಾ ಮಠದಲ್ಲಿ ಲಿಂಗೈಕ್ಯೆ ಮುಪ್ಪಿನಾರ್ಯ ಶ್ರೀಗಳ ಅಮೃತ ಶಿಲಾಮೂರ್ತಿ ಪ್ರತಿಷ್ಟಾಪನೆ ಮಾಡುವ ಬಹುದಿನಗಳ ಕನಸು ನನಸಾಗುತ್ತಿರುವುದು ಸಂತೋಷ ತದಿದೆ ಎಂದು ಐರಣಿ ಹೊಳೆಮಠದ ಬಸವ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಐರಣಿ ಶಾಖಾ ಮಠದಲ್ಲಿ ಲಿಂಗೈಕ್ಯೆ ಮುಪ್ಪಿನಾರ್ಯ ಶ್ರೀಗಳ ಅಮೃತ ಶಿಲಾಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು.ಐತಿಹಾಸಿಕ ಪುಣ್ಯಕ್ಷೇತ್ರವಾದ ಹರಿಹರದಲ್ಲಿ ಶಾಖಾ ಮಠ ಸ್ಥಪನೆಯಾಗಬೇಕು ಎಂಬ ಇಲ್ಲಿನ ಭಕ್ತರ ಆಶಯದಂತೆ ಮಠ ಜೊತೆಗೆ ಬಡವ ಕಲ್ಯಾಣಕ್ಕಾಗಿ ಸುಂದರ ಧಾರ್ಮಿಕ ಕಲ್ಯಾಣ ಮಂಟಪವು ನಿರ್ಮಾಣವಾಗಿರುವುದು ಇಲ್ಲಿನ ಜನರ ಸಹಕಾರವೆ ಕಾರಣವಾಗಿದೆ ಎಂದರುಇದೆ ರೀತಿ ಮಠದಲ್ಲಿ ಲಿಂಗಕ್ಯೆ ಮುಪ್ಪಿನಾರ್ಯ ಶ್ರೀಗಳ ಅಮೃತ ಶಿಲಾಮೂರ್ತಿ ಪ್ರತಿಷ್ಟಾಪನೆಯ ಕಾರ್ಯಕ್ರಮವನ್ನು ಇಲ್ಲಿನ ಭಕ್ತರ ಹಾಗೂ ಮುಖಂಡರ ಸಹಕಾರದೊಂದಿಗೆ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಶಾಸಕ ಎಸ್. ರಾಮಪ್ಪ ಮಾತನಾಡಿ, ಐರಣಿ ಮಠವು ಯಾವುದೇ ಒಂದು ಜಾತಿಗೆ ಸೀಮಿತ ವಾಗಿರದೆ ಎಲ್ಲಾ ಸಮಾಜಗಳ ಸಹಕಾರದಿಂದ ಜಾತ್ಯಾತೀತ ಮಠವಾಗಿ ಬೆಳೆದು ನಿಂತಿರುವುದು ಅಂದಿನ ಲಿಂಗೈಕ್ಯೆ ಮುಪ್ಪಿನಾರ್ಯಾ ಶ್ರೀಗಳು ಹಾಗೂ ಇಂದಿನ ಬಸವ ದೇಶಿಕೇಂದ್ರ ಶ್ರೀಗಳು ಅನೇಕ ಭಕ್ತರಿಗೆ ಪವಾಡ ಪುರುಷರಾದ ಸಿದ್ದಾರೋಡರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಮಠವು ಮುನ್ನಡೆಯುತ್ತಿದೆ ಎಂದರು.ನಾನು ನಗರಸಭೆ ಸದಸ್ಯನಾದ ಸಂದರ್ಭದಲ್ಲಿ ಹರಿಹರದಲ್ಲಿ ಶಾಖಾ ಮಠದ ಕಟ್ಟಡ ಬಗ್ಗೆ ಈ ಮಠದ ಭಕ್ತರಾದ ನೆಲ್ಲಿ ಪಾಂಡು ಹಾಗೂ ಬಾಬಣ್ಣ ನಮ್ಮ ಬಳಿ ಬಂದು ಹೇಳಿದರು ಆಗಲೇ ನಾವು ಸಹಕಾರ ನೀಡುತ್ತೇನೆ ಎಂದಿದ್ದೆ. ಈಗ ಶಾಸಕನಾಗಿದ್ದೇನೆ ಈ ಮಠದಲ್ಲಿ ಆಗಬೇಕಾದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಶ್ರೀಗಳ ಆದೇಶದಂತೆ ಸಹಕಾರ ನೀಡಲಾಗುವುದು ಎಂದರು.ಇನ್ನೂ ವಿದ್ಯಾನಗರ 60 ಅಡಿ ರಸ್ತೆಯ ಮುಂಭಾಗದಲ್ಲಿ ದ್ವಾರಭಾಗಿಲು ನಿರ್ಮಾಣಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ನಗರಸಭೆಯ ಎಲ್ಲಾ ಸದಸ್ಯರನ್ನು ಕರೆದು ಹೇಳುತ್ತೇನೆ. ನಗರಸಭೆಯಿಂದಲು ರಸ್ತೆಯ ಅಭಿವೃದ್ಧಿ ಸೇರಿದಂತೆ ಇತರೆ ಎಲ್ಲಾ ರೀತಿಯ ಸಹಕಾರವನ್ನು ಕೊಡಿಸುವ ಭರವಸೆಯನ್ನು ನೀಡಿದರು.ನಗರಸಭೆ ಸದಸ್ಯ ಶಂಕರ ಖಟಾವಕರ್ ಮಾತನಾಡಿ, ಹರಿಹರ ನಗರವು ಮಠಗಳ ಕೇಂದ್ರವಾಗಿದೆ. ನಗರದಲ್ಲಿರುವ ಐರಣಿ ಮಠವು ಜಾತ್ಯಾತೀತವಾಗಿ ತನ್ನದೆಯಾದ ಇತಿಹಾಸ ಹೊಂದಿದೆ. ಅನೇಕ ವಿಘ್ನನಗಳು ಇದ್ದರೂ ಈ ಭಾಗದಲ್ಲಿ ಸುಂದರವಾದ ಕಲ್ಯಾಣ ಮಂಟಪ ನಿರ್ಮಿಸಿದ ಕೀರ್ತಿ ಶ್ರೀಗಳಿಗೆ ಸಲುತ್ತದೆ.ದ್ವಾರಭಾಗಿಲು ನಿರ್ಮಾಣಕ್ಕೆ ನಮ್ಮ ಶಾಸಕರ ಹಾಗೂ ನಗರಸಭೆಯ ಎಲ್ಲಾ ಸದಸ್ಯರು ಒಪ್ಪಿಗೆ ಪಡೆದು ಸಹಕಾರವನ್ನು ನೀಡಲಾಗುವುದು ಈ ಹಿಂದೆ ನಾನು ಹರಿಹರೇಶ್ವರ ದೇವಸ್ಥಾನ ರಸ್ತೆಗು ದ್ವಾರಭಾಗಿಲು ನಿರ್ಮಿಸಲು ಒತ್ತಡ ಹಾಕಲಾಗಿತ್ತು. ಆದರೆ ಕೆಲವರ ಕುತಂತ್ರದಿAದ ಆ ಶುಭಕಾರ್ಯ ಆಗಲ್ಲಿಲ್ಲ. ಹೀಗೆ ಒಳ್ಳೆಯ ಕಾರ್ಯಗಳು ಮಾಡುವ ಸಂದರ್ಭಗಳಲ್ಲಿ ವಿಘ್ನಗಳು ಬರುತ್ತವೆ ಇದಕ್ಕೆಲ್ಲ ತೆಲೆಬಾಗದೆ ಎಲ್ಲರೂ ಒಟ್ಟಾಗಿ ಕೈಜೋಡಿಸಿ ಕೆಲಸ ಮಾಡಿ ಶ್ರೀ ಮಠದ ಅಭಿವೃದ್ಧಿ ಮಾಡೋಣ ಎಂದರು.ನಗರಸಭೆ ಮಾಜಿ ಸದಸ್ಯ ಬಿ.ರೇವಣಸಿದ್ದಪ್ಪ ಮಾತನಾಡಿ, ಮಠದ ರಸ್ತೆಯಲ್ಲಿ ದ್ವಾರಭಾಗಿಲು ನಿರ್ಮಾಣ ಹರಿಹರಕ್ಕೆ ಶೋಭೆ. ಶಾಸಕರು ಈ ಮಠದ ಮೇಲೆ ಅಪಾರ ಅಭಿಮಾನವಿದೆ ಯಾವುದೇ ತೊಂದರೆಗಳು ಬಂದರು ಬೇಗನೆ ಬಗೆಹರಿಸಿಕೊಡುತ್ತಾರೆ. ಆದಷ್ಟು ಬೇಗನೆ ಶ್ರೀಗಳ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಮಠದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳೋಣ ಎಂದರು.ಉದ್ಯಮಿ ಐರಣಿ ಬಾಬಣ್ಣ ಶೆಟ್ರು ಮಾತನಾಡಿ, ಐರಣಿ ಮಠವು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಈ ಮಠವು ಜಾತ್ಯಾತೀತ ಮಠವಾಗಿದ್ದು, ಯಾರಿಂದಲೂ ದೇಣಿಗೆಯನ್ನು ಪಡೆಯದೆ ಮಠದ ಅಭಿವೃದ್ಧಿ ಕಾರ್ಯಗಳನ್ನು ಶ್ರೀಗಳು ಮಾಡುತ್ತಾ ಬರುತ್ತಿದ್ದಾರೆ. ಇಲ್ಲಿನ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಶ್ರೀಗಳ ಶಿಲಾಮೂರ್ತಿಯನ್ನು ಹರಿಜನ ಕಾಲೋನಿಯಿಂದ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಬರಮಾಡಿಕೊಂಡು ನಂತರ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು. ಶ್ರೀ ಬ್ರಹ್ಮಾನಂದ ಮಠದ ವಿವೇಕಾನಂದ ಸ್ವಾಮಿ, ಶಿವಪ್ರಕಾಶ ಶಾಸ್ತ್ರಿ, ಟಿ.ಜೆ ಮುರುಗೇಶಪ್ಪ, ನಾಗರಾಜ್ ಮೆರ‍್ವಾಡೆ, ಎಪಿಎಂಸಿ ಸದಸ್ಯ ಹನುಮಂತಪ್ಪ ರೆಡ್ಡಿ, ಅಮರಾವತಿ ರೇವಣಸಿದ್ದಪ್ಪ, ಗಣೇಶ್ ನಲ್ಲಿ, ಎನ್.ಇ ಸುರೇಶಸ್ವಾಮಿ, ನಾಗರಾಜ ಗೌಡ, ಆಟೋ ರಾಜು, ಕೋಡಿಹಳ್ಳಿ ನಾಗರಾಜ್, ಲಿಂಗರಾಜ್, ಹನುಮಂತ ಮಠ, ಹೆಚ್. ನಾಗಭೂಷಣ, ಅಜಿತ್ ಸಾವಂತ್, ಎಚ್. ಬಸವರಾಜಪ್ಪ, ದೇವೇಂದ್ರಪ್ಪ, ನೇತ್ರಾವತಿ ಪ್ಯಾಟಿ, ರೇಣುಕಾ ಗಡಾದ್ ಸೇರಿದಂತೆ ಐರಣಿ ಮಠದ ಹಲವಾರು ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು. 

Attachments area