ಐಮಂಗಲದಲ್ಲಿ ಜ್ಞಾನದ ಬೆಳಕು ಕಾರ್ಯಕ್ರಮ


ಹಿರಿಯೂರು.ಡಿ. 1; ತಾಲೂಕಿನ ಐಮಂಗಲದಲ್ಲಿರುವ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದಲ್ಲಿ ನಾಳೆ ಬೆಳಿಗ್ಗೆ 11:00 ಗಂಟೆಗೆ ಜ್ಞಾನದ ಬೆಳಕು ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು ಸಾಹಿತಿಗಳಾದ ಪಗಡಲಬಂಡೆ ನಾಗೇಂದ್ರಪ್ಪ, ನಂಜುಂಡಸ್ವಾಮಿ , ಹಾಸ್ಯ ಸಾಹಿತಿ ಜಗನ್ನಾಥ್ , ಎಂ ಡಿ ಕೋಟೆ ಗ್ರಾಮ ಪಂಚಾಯತಿ ಸದಸ್ಯರಾದ  ನಿರಂಜನ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸು ವಂತೆ ಕಾರ್ಯಕ್ರಮ ಸಂಯೋಜಕರು ಮನವಿ ಮಾಡಿದ್ದಾರೆ.