ಐಪಿಲ್ ಬೆಟ್ಟಿಂಗ್: ಸ್ಥಳೀಯ ಆಡಳಿತ ಭಾಗಿ ಪ್ರಿಯಾಂಕ್ ಖರ್ಗೆ ಶಂಕೆ

ಕಲಬುರಗಿ:ನ.15: ಜಿಲ್ಲೆಯಲ್ಲಿ ನಡೆಯುತ್ತಿರುವ ಐಪಿಲ್ ಬೆಟ್ಟಿಂಗ್ ಕುರಿತು ಗೃಹ ಇಲಾಖೆಯನ್ನು ಹೊರತುಪಡಿಸಿ ಉಳಿದವರಿಗೆಲ್ಲರಿಗೂ ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಐಪಿಲ್ ಬೆಟ್ಟಿಂಗ್ ಹಾಗೂ ಇತ್ತೀಚಿಗೆ ಸೋಲಾಪುರ ಪೊಲೀಸರ ದಾಳಿ ಕುರಿತು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿ ಇಷ್ಟೆಲ್ಲ ನಡೆದಿದ್ದರೂ ಕೂಡಾ ಗೃಹ ಸಚಿವರಿಂದ ಈ ವಿಷಯದ ಕುರಿತು ಒಂದೇ ಒಂದು ಪ್ರತಿಕ್ರಿಯೆ ಇಲ್ಲ ಎಂದು ಅವರು ಟ್ವಿಟ್ ಮಾಡುವ ಮೂಲಕ ಟೀಕಿಸಿದ್ದಾರೆ.

ಗೃಹ ಇಲಾಖೆಗೆ ಈ ಕುರಿತು ಸುಳಿವು ಇರಲಿಕ್ಕಿಲ್ಲ ಅಥವಾ ಸ್ಥಳೀಯ ಆಡಳಿತ ಈ ಬಗ್ಗೆ ಮಾಹಿತಿ ನೀಡಿರಲಿಕ್ಕಿಲ್ಲ ಯಾಕೆಂದರೆ ಅವರೂ ಕೂಡಾ ಭಾಗಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.