ಐಪಿಎಲ್: 5ನೇ ಬಾರಿ ಚಾಂಪಿಯನ್ ಪಟ್ಟ ಗೆದ್ದು ಬೀಗಿದ ಮುಂಬೈ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಲ್ಲಿ ಮಂಗಳವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ 5 ವಿಕೆಟ್‌ ಗಳ ಗೆಲುವು ಸಾಧಿಸಿತು. ಈ ಜಯದೊಂದಿಗೆ ಮುಂಬೈ 5 ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು.

ರೋಹಿತ್ ಅರ್ಧಶತಕ: 157 ರನ್ ಗಳ ಗುರಿ ಬೆನ್ನತ್ತಿದ ಮುಂಬೈ ತಂಡ ಅಷ್ಟೇನು ಉತ್ತಮ ಆರಂಭ ಪಡೆಯಲಿಲ್ಲ. ಡಿಕಾಕ್ (20) ಬೇಗನೆ ನಿರ್ಗಮಿಸಿದರು. ಸೂರ್ಯಕುಮಾರ್ (19) ರನೌಟ್ ಗೆ ಬಲಿಯಾದರು. ನಾಯಕ ರೋಹಿತ್ ಶರ್ಮಾ ಇವರಿಬ್ಬರೊಂದಿಗೂ ತಲಾ 45 ರನ್ ಗಳ ಜೊತೆಯಾಟ ನಿರ್ವಹಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ 51 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ನೊಂದಿಗೆ 68 ರನ್ ಗಳಿಸಿ ಔಟಾದರು.


ಕೊನೆಯಲ್ಲಿ ಕಿಶನ್ (33*) ವೇಗದ ಬ್ಯಾಟಿಂಗ್ ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಮುಂಬೈ 18.4 ಓವರಲ್ಲಿ 5 ವಿಕೆಟ್ ಗೆ 157 ರನ್ ಗಳಿಸಿ ಜಯದ ನಗೆ ಬೀರಿತು.

ಬೌಲ್ಟ್ ಮಾರಕ ದಾಳಿ:


ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ, ಇನ್ನಿಂಗ್ಸ್ ಮೊದಲ ಎಸೆತದಲ್ಲಿ ಬೌಲ್ಟ್ ಮಾರಕ ದಾಳಿಗೆ ಸ್ಟೋಯ್ನಿಸ್ (0) ವಿಕೆಟ್ ಒಪ್ಪಿಸಿ ಹೊರನಡೆದರು. ರಹಾನೆ (2), ಧವನ್ (15) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ಡೆಲ್ಲಿ ಕೇವಲ 22 ರನ್ ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 4 ನೇ ವಿಕೆಟ್ ಗೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ 96 ರನ್ ಗಳ ಜೊತೆಯಾಟ ನಿರ್ವಹಿಸಿ ತಂಡದ ಮೊತ್ತ ಹೆಚ್ಚಿಸಿದರು.
ರಿಷಭ್ (56) ರನ್ ಗಳಿಸಿದರು. ಈ ಆವೃತ್ತಿಯಲ್ಲಿ ರಿಷಭ್ ಅವರ ವೈಯುಕ್ತಿಕ ಗರಿಷ್ಠ ರನ್ ಇದಾಗಿದೆ. ಶ್ರೇಯಸ್ (65*) ರನ್ ಗಳಿಸಿದರು. ಡೆಲ್ಲಿ 20 ಓವರಲ್ಲಿ 7 ವಿಕೆಟ್‌ ಗೆ 156 ರನ್ ಗಳಿಸಿತು. ಮುಂಬೈ ಪರ ಬೌಲ್ಟ್ 3, ಕಲ್ಟರ್ ನೈಲ್ 2 ವಿಕೆಟ್ ಪಡೆದರು.

ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್ 20 ಓವರಲ್ಲಿ 156/7
ಸ್ಟೋಯ್ನಿಸ್ ಸಿ ಡಿಕಾಕ್ ಬಿ ಬೌಲ್ಟ್ 00(01)
ಧವನ್ ಬಿ ಜಯಂತ್ 15(13)
ರಹಾನೆ ಸಿ ಡಿಕಾಕ್ ಬಿ ಬೌಲ್ಟ್ 02(04)
ಶ್ರೇಯಸ್ ಅಜೇಯ 65(50)
ರಿಷಭ್ ಸಿ ಹಾರ್ದಿಕ್ ಬಿ ಕಲ್ಟರ್ 56(38)
ಹೆಟ್ಮೇಯರ್ ಸಿ ಕಲ್ಟರ್ ಬಿ ಬೌಲ್ಟ್ 05(05)
ಅಕ್ಷರ್ ಸಿ(ಸಬ್) ಅನುಕೂಲ್ ಬಿ ಕಲ್ಟರ್ 09(09)
ರಬಾಡ ರನೌಟ್ (ಸೂರ್ಯ/ಕಲ್ಟರ್) 00(00)
ಇತರೆ: 04(ಲೆಗ್ ಬೈ 01, ವೈಡ್ 03)
ವಿಕೆಟ್: 1-0(ಸ್ಟೋಯ್ನಿಸ್), 2-16(ರಹಾನೆ), 3-22(ಧವನ್), 4-118(ರಿಷಭ್), 5-137(ಹೆಟ್ಮೇಯರ್), 6-149(ಅಕ್ಷರ್), 7-156(ರಬಾಡ)

ಬೌಲಿಂಗ್: ಬೌಲ್ಟ್ 4-0-30-3, ಬೂಮ್ರಾ 4-0-28-0, ಜಯಂತ್ 4-0-25-1, ಕಲ್ಟರ್ 4-0-29-2, ಕೃನಾಲ್ 3-0-30-0, ಪೊಲ್ಲಾರ್ಡ್ 1-0-13-0

ಮುಂಬೈ ಇಂಡಿಯನ್ಸ್ 18.4 ಓವರಲ್ಲಿ 157/5
ರೋಹಿತ್ ಸಿ(ಸಬ್) ಲಲಿತ್ ಬಿ ನೋಕಿಯೆ 68(51)
ಡಿಕಾಕ್ ಸಿ ರಿಷಭ್ ಬಿ ಸ್ಟೋಯ್ನಿಸ್ 20(12)
ಸೂರ್ಯ ರನೌಟ್ (ದುಬೆ/ರಿಷಭ್) 19(20)
ಕಿಶನ್ ಅಜೇಯ 33(19)
ಪೊಲ್ಲಾರ್ಡ್ ಬಿ ರಬಾಡ 09(04)
ಹಾರ್ದಿಕ್ ಸಿ ರಹಾನೆ ಬಿ ನೋಕಿಯೆ 03(05)
ಕೃನಾಲ್ ಅಜೇಯ 01(01)
ಇತರೆ: 04(ಲೆಗ್ ಬೈ 04)

ವಿಕೆಟ್ ಪತನ: 1-45(ಡಿಕಾಕ್), 2-90(ಸೂರ್ಯ), 3-137(ರೋಹಿತ್), 4-147(ಪೊಲ್ಲಾರ್ಡ್), 5-156(ಹಾರ್ದಿಕ್)

ಬೌಲಿಂಗ್: ಅಶ್ವಿನ್ 4-0-28-0, ರಬಾಡ 3-0-32-1, ನೋಕಿಯೆ 2.4-0-25-2, ಸ್ಟೋಯ್ನಿಸ್ 2-0-23-1, ಅಕ್ಷರ್ 4-0-16-0, ದುಬೆ 3-0-29-0

ಪಂದ್ಯ ಶ್ರೇಷ್ಠ: ಟ್ರೆಂಟ್ ಬೌಲ್ಟ್