ಐಪಿಎಲ್ 2020: ಸೂಪರ್ ಓವರಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್


ದುಬೈ, ಸೆ. 21- ಐಪಿಎಲ್ 13 ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್ ನಲ್ಲಿ ಸೂಪರ್ ಗೆಲುವು ದಾಖಲಿಸಿದೆ. ಇದರೊಂದಿಗೆ ಟೂರ್ನಿಯ ಲ್ಲಿ ಡೆಲ್ಲಿ ಶುಭಾರಂಭ ಮಾಡಿದೆ.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 2 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಆಲೌಟ್ ಗೆ ಗುರಿಯಾಯಿತು. (ಸೂಪರ್ ಓವರಲ್ಲಿ ಒಂದು ತಂಡ 2 ವಿಕೆಟ್ ಕಳೆದುಕೊಂಡರೆ ಅದನ್ನು ಆಲೌಟ್ ಎಂದು ಪರಿಗಣಿಸಲಾಗುವುದು.) ಗೆಲುವಿಗೆ 3 ರನ್ ಗಳ ಗುರಿ ಪಡೆದ ಡೆಲ್ಲಿ ಕೇವಲ 2 ಎಸೆತಗಳಲ್ಲಿ 3 ರನ್ ಗಳಿಸಿ ಜಯದ ನಗೆ ಬೀರಿತು.


ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೈ ಮಾಡಿಕೊಳ್ಳುವ ಲ್ಲಿ ಯಶಸ್ವಿಯಾಯಿತು.
ಮಯಾಂಕ್ ಅಗರ್ ವಾಲ್ ಭರ್ಜರಿ ಅರ್ಧಶತಕ ಸಿಡಿಸಿದರೂ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಪಂಜಾಬ್ ಪರ ಮಯಾಂಕ್ 60 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಮೂಲಕ 89 ರನ್ ಗಳಿಸಿದರು. ಪಂದ್ಯ ಟೈ ಆಗುವಲ್ಲಿ ಮಯಾಂಕ್ ಮಹತ್ವದ ಪಾತ್ರ ವಹಿಸಿದರು. ಡೆಲ್ಲಿ ಪರ ರಬಾಡ, ಅಶ್ವಿನ್ ಹಾಗೂ ಸ್ಟೋಯ್ನಿಸ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ನ ನಾಯಕ ಕೆ.ಎಲ್. ರಾಹುಲ್, ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿದರು.

ಡೆಲ್ಲಿಗೆ ಆಘಾತ ನೀಡಿದ ಶಮಿ:
ಇನ್ನಿಂಗ್ಸ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಪಂಜಾಬ್ ವೇಗಿ ಶಮಿ ಆರಂಭಿಕ ಆಘಾತ ನೀಡಿದರು. ಶಮಿ ಮಾರಕ ದಾಳಿಗೆ ಕುಸಿದ ಡೆಲ್ಲಿ ತಂಡ ಕೇವಲ 13 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಕ್ಕೆ ಸಿಲುಕಿತು. ಬಳಿಕ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಡೆಲ್ಲಿ ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿ ಯುತ ಬ್ಯಾಟಿಂಗ್ ಮಾಡಿದ ಈ ಇಬ್ಬರೂ ಬ್ಯಾಟ್ಸ್‌ಮನ್ ಗಳು ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಆದರೂ ಡೆಲ್ಲಿ ಮೊದಲ 10 ಓವರ್ ಮುಕ್ತಾಯ ಕ್ಕೆ ಕೇವಲ 49 ರನ್ ಗಳಿಸಿತ್ತು. ರಿಷಭ್ (31) ರನ್ ಗಳಿಸಿದರೆ, ಶ್ರೇಯಸ್ (39) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ಕೆಳ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಡೆಲ್ಲಿ ಸವಾಲಿನ ಮೊತ್ತಕ್ಕೆ ಕಾರಣರಾದರು.


ಕೊನೆ 6 ಎಸೆತ 30 ರನ್ :
ಇನ್ನಿಂಗ್ಸ್ ನ 19 ನೇ ಓವರ್ ಮುಕ್ತಾಯಕ್ಕೆ ಡೆಲ್ಲಿ 7 ವಿಕೆಟ್ ಗೆ 127 ರನ್ ಗಳಿಸಿತ್ತು. ಕೊನೆಯ 6 ಎಸೆತಗಳಲ್ಲಿ ಸ್ಟೋಯ್ನಿಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. 2 ಸಿಕ್ಸ್, 3 ಬೌಂಡರಿ, 2 ವೈಡ್, 1 ನೋ ಬಾಲ್ ಹಾಗೂ 3 ರನ್ ಬಂತು. ಇದರಲ್ಲಿ ಸ್ಟೋಯ್ನಿಸ್ 24 ರನ್ ಬಾರಿಸಿದರು. ಕೇವಲ 21 ಎಸೆತಗಳಲ್ಲಿ ಸ್ಟೋಯ್ನಿಸ್ 53 ರನ್ ಕಲೆಹಾಕಿದರು. ಅಂತಿಮವಾಗಿ ಡೆಲ್ಲಿ 20 ಓವರಲ್ಲಿ 8 ವಿಕೆಟ್ ಗೆ 157 ರನ್ ಗಳಿಸಿತು. ಪಂಜಾಬ್ ಪರ ಶಮಿ 3 ವಿಕೆಟ್ ಪಡೆದರು.

ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್ 20 ಓವರಲ್ಲಿ 157/8
ಪೃಥ್ವಿ ಸಿ ಜೋರ್ಡನ್ ಬಿ ಶಮಿ 05(09)
ಧವನ್ ರನೌಟ್ (ರಾಹುಲ್/ಗೌತಮ್) 00(02)
ಹೆಟ್ಮೇಯರ್ ಸಿ ಮಯಾಂಕ್ ಬಿ ಶಮಿ 07(13)
ಶ್ರೇಯಸ್ ಸಿ ಜೋರ್ಡನ್ ಬಿ ಶಮಿ 39(32)
ರಿಷಭ್ ಪಂತ್ ಬಿ ರವಿ ಬಿಷ್ಣೋಯಿ 31(29)
ಸ್ಟೋಯ್ನಿಸ್ ರನೌಟ್ (ಪೂರನ್/ರಾಹುಲ್) 53(21)
ಅಕ್ಷರ್ ಪಟೇಲ್ ಸಿ ರಾಹುಲ್ ಬಿ ಕಾರ್ಟೆಲ್ 06(09)
ಅಶ್ವಿನ್ ಸಿ ಶಮಿ ಬಿ ಕಾರ್ಟೆಲ್ 04(06)
ರಬಾಡ ಅಜೇಯ 00(00)
ನೊಟ್ಜೆ ಅಜೇಯ 03(01)
ಇತರೆ: 09 (ಬೈ 01, ವೈಡ್ 06, ನೋಬಾಲ್ 02)

ವಿಕೆಟ್ ಪತನ: 1-6(ಧವನ್), 2-9(ಪೃಥ್ವಿ), 3-13(ಹೆಟ್ಮೇಯರ್), 4-86(ರಿಷಭ್), 5-87(ಶ್ರೇಯಸ್), 6-96(ಅಕ್ಷರ್), 7-127(ಅಶ್ವಿನ್), 8-154(ಸ್ಟೋಯ್ನಿಸ್)

ಬೌಲಿಂಗ್: ಕಾರ್ಟೆಲ್ 4-0-24-2, ಶಮಿ 4-0-15-3, ಜೋರ್ಡನ್ 4-0-56-0, ಗೌತಮ್ 4-0-29-0, ರವಿ ಬಿಷ್ಣೋಯಿ 4-0-22-1

ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರಲ್ಲಿ 157/8
ರಾಹುಲ್ ಬಿ ಮೋಹಿತ್ ಶರ್ಮಾ 21(19)
ಮಯಾಂಕ್ ಸಿ ಹೆಟ್ಮೇಯರ್ ಬಿ ಸ್ಟೋಯ್ನಿಸ್ 89(60)
ಕರುಣ್ ನಾಯರ್ ಸಿ ಪೃಥ್ವಿ ಬಿ ಅಶ್ವಿನ್ 01(03)
ನಿಕೋಲಸ್ ಪೂರನ್ ಬಿ ಅಶ್ವಿನ್ 00(03)
ಮ್ಯಾಕ್ಸ್ ವೆಲ್ ಸಿ ಶ್ರೇಯಸ್ ಬಿ ರಬಾಡ 01(04)
ಸರ್ಫರಾಜ್ ಖಾನ್ ಸಿ ಪೃಥ್ವಿ ಬಿ ಅಕ್ಷರ್ 12(12)
ಗೌತಮ್ ಸಿ ರಿಷಭ್ ಬಿ ರಬಾಡ 20(14)
ಜೋರ್ಡನ್ ಸಿ ರಬಾಡ ಬಿ ಸ್ಟೋಯ್ನಿಸ್ 05(06)
ಶಮಿ ಅಜೇಯ 00(00)
ಇತರೆ: 08(ಲೆಗ್ ಬೈ 06, ವೈಡ್ 01, ನೋಬಾಲ್ 01)
ವಿಕೆಟ್ ಪತನ: 1-30(ರಾಹುಲ್), 2-33(ಕರುಣ್), 3-34(ಪೂರನ್), 4-35(ಮ್ಯಾಕ್ಸ್ ವೆಲ್), 5-55(ಸರ್ಫರಾಜ್), 6-101(ಗೌತಮ್), 7-157(ಮಯಾಂಕ್), 8-157(ಜೋರ್ಡನ್)

ಬೌಲಿಂಗ್: ಅನ್ರಿಚ್ ನೊಟ್ಜೆ 4-0-33-0, ಮೋಹಿತ್ 4-0-45-1, ರಬಾಡ 4-0-28-2, ಅಶ್ವಿನ್ 1-0-2-2, ಅಕ್ಷರ್ ಪಟೇಲ್ 4-0-14-1, ಸ್ಟೋಯ್ನಿಸ್ 3-0-29-2

ಪಂದ್ಯ ಶ್ರೇಷ್ಠ: ಮಾರ್ಕಸ್ ಸ್ಟೋಯ್ನಿಸ್.