ಐಪಿಎಲ್ ೩ ನಿಯಮ ಬದಲಾವಣೆ


ಮುಂಬೈ, ಮಾ. ೩೦- ಮುಂದಿನ ತಿಂಗಳು ೯ ರಿಂದ ಚಿನಕುರಳಿ ಕ್ರಿಕೆಟ್ ಎಂದೇ ಖ್ಯಾತಿಯಾಗಿರುವ ಇಂಡಿಯನ್ ಪ್ರೀಮಿಯಂ ಲೀಗ್‌ನಲ್ಲಿ ಮೂರು ನಿಯಮಾವಳಿಗಳನ್ನು ಬಿಸಿಸಿಐ ಬದಲಾಯಿಸಿದೆ. ಇದೇ ಮೊದಲ ಬಾರಿಗೆ ನಿಯಮಗಳನ್ನು ಬದಲಾಯಿಸಲು ಬಿಸಿಸಿಐ ಮುಂದಾಗಿದೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಟಿ-೨೦ ಪಂದ್ಯದ ವೇಳೆ ವಿವಾದಕ್ಕೆ ಕಾರಣವಾಗಿದ್ದ ಸಾಫ್ಟ್ ಸಿಗ್ನಲ್ ನಿಯಮವನ್ನು ಬದಲಾಯಿಸಿದೆ.
ಹೊಸ ನಿಯಮದ ಅನುಸಾರ ಅಂಪೈರ್ ಸಾಫ್ಟ್ ಸಿಗ್ನಲ್ ನೀಡಿದರೂ ಅದು ಅಂತಿಮ ತೀರ್ಪು ಆಗಿರುವುದಿಲ್ಲ. ಅದನ್ನು ೩ನೇ ಅಂಪೈರ್ ಪರಿಶೀಲಿಸಿ ತೀರ್ಪನ್ನು ಬದಲಾಯಿಸುವ ಅವಕಾಶ ಕಲ್ಪಿಸಲಾಗಿದೆ.
೩ನೇ ಬದಲಾವಣೆ, ನೋ ಬಾಲ್ ನಿಯಮದಲ್ಲೂ ಬದಲಾವಣೆ ಮಾಡಲಾಗಿದ್ದು, ಹೊಸ ನಿಯಮದಂತೆ ಆನ್ ಫೀಲ್ಡ್ ಅಂಪೈರ್ ನೋ ಬಾಲ್ ತೀರ್ಪು ನೀಡಿದರೂ ಅದನ್ನು ಪರಿಶೀಲಿಸಿ ೩ನೆ ಅಂಪೈರ್ ತೀರ್ಪುನ್ನು ರದ್ದುಗೊಳಿಸಬಹುದಾಗಿದೆ.