ಐಪಿಎಲ್ ಸ್ಥಗಿತಗೊಳಿಸಲು ಎಐಡಿಎಸ್‍ಓ ಆಗ್ರಹ

ಕಲಬುರಗಿ ಮೇ 1: ಹಲವು ಕೆಲಸಗಾರರನ್ನು ಬಳಸಿಕೊಂಡು, ಕೋಟ್ಯಂತರರೂಪಾಯಿ ಖರ್ಚು ಮಾಡಿ ಐಪಿಎಲ್ ನಡೆಸುವುದು ಎಷ್ಟು ಸೂಕ್ತ. ಆದ್ದರಿಂದ ಐಪಿಎಲ್ ಸ್ಥಗಿತಗೊಳಿಸಲು ಎಐಡಿಎಸ್‍ಓ ಆಗ್ರಹಿಸಿದೆ
ಈ ಸಂಕಷ್ಟಮಯ ದಿನಗಳನ್ನು ಕಳೆಯಲು ಐಪಿಎಲ್ ಪಂದ್ಯಗಳು ಮನೋರಂಜನೆ
ನೀಡುತ್ತದೆ ಎಂದು ವಾದಿಸುತ್ತಾರೆ. ಸುತ್ತಲಿನ ಜನ, ನಮ್ಮ ಪ್ರೀತಿಪಾತ್ರರುಸಾಯುತ್ತಿದ್ದಾಗ, ಇದೀಗ ಹೇರಿರುವ ಲಾಕ್ ಡೌನ್ ನಿಂದ ಕೋಟ್ಯಂತರ ಮಂದಿ ಹಸಿವನ್ನೆಜೀವನವನ್ನಾಗಿಸಲು ನಿಟ್ಟುಸಿರು ಬಿಡುತ್ತಿರುವಾಗ ಮನೋರಂಜನೆ ಎಷ್ಟು ಸರಿ?ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಬೇಕಿರುವ ಹಣ ಮತ್ತು ಸಂಪನ್ಮೂಲ, ಎರಡೂಬೃಹತ್ ಪ್ರಮಾಣದಲ್ಲಿ ಐಪಿಎಲ್ ನಲ್ಲಿ ಬಳಕೆಯಾಗುತ್ತಿದೆ.ಐಪಿಎಲ್ ನಡೆಸುತ್ತಿರುವದೊಡ್ಡ ದೊಡ್ಡ ಖಾಸಗೀ ಕಂಪನಿಗಳು, ಯಾರ ಲಾಭಕ್ಕಾಗಿ ಇಂದು ಶಿಕ್ಷಣ, ಆರೋಗ್ಯವ್ಯಾಪಾರದ ಹುದ್ದೆಯಾಗಿ ಮಾರ್ಪಾಡು ಆಗಿದೆ, ಅದನ್ನು ನಾವು ವಿರೋಧಿಸುತ್ತೇವೆ.ಇದೀಗ ನಾವು ಆರೋಗ್ಯ ವ್ಯವಸ್ಥೆಯ ಸಂಪೂರ್ಣ ವೈಫಲ್ಯದ ಪರಿಣಾಮ ನೋಡುತ್ತಿದ್ದೇವೆ.ಲಾಕ್ ಡೌನ್ ಆರಂಭವಾಗಿದೆ.ಹಸಿವಿನ ಆಕ್ರಂದನ ಇನ್ನೇನು
ನಮ್ಮನ್ನು ತೀವ್ರವಾಗಿ ಕಾಡಲಿದೆ. ಆದ್ದರಿಂದ ಈ ಕೂಡಲೇ ಐಪಿಎಲ್ ಸ್ಥಗಿತಗೊಳಿಸಬೇಕು
ಎಂದು ಜಿಲ್ಲಾ ಅಧ್ಯಕ್ಷ ಹಣಮಂತ.ಎಸ್.ಎಚ್ ,ಕಾರ್ಯದರ್ಶಿ ಈರಣ್ಣಾ ಇಸಬಾ ಆಗ್ರಹಿಸಿದ್ದಾರೆ