ಐಪಿಎಲ್: ಸೋಮವಾರದಿಂದ ಆರ್‌ಸಿಬಿ ಅಭಿಯಾನ ಆರಂಭ

ದುಬೈ, ಸೆ.20 – ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆದರೆ ಐಪಿಎಲ್‌ನಲ್ಲಿ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಮ್ಮೆಯೂ ಐಪಿಎಲ್ ನಲ್ಲಿ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.

ರನ್ ಮಷಿನ್ ವಿರಾಟ್ ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಮತ್ತು ಈ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಆದರೆ ಅವರ ಹೆಸರಲ್ಲಿ ಒಂದೇ ಒಂದು ಐಪಿಎಲ್ ಟ್ರೋಫಿ ಇಲ್ಲ. ಬೆಂಗಳೂರು ತಂಡ ಐಪಿಎಲ್ -13 ರಲ್ಲಿ ವಿದೇಶಿ ನೆಲದಲ್ಲಿ ತಮ್ಮ ಅಭಿಯಾನವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರಂಭಿಸಲಿದ್ದು, ಕುತೂಹಲ ಮೂಡಿಸಿದೆ.

ಬೆಂಗಳೂರಿನ ನಾಯಕನಾಗಿ ವಿರಾಟ್ ಗೆ ಇದು ಎಂಟನೇ ಋತುವಾಗಿದೆ. ವಿರಾಟ್ ಐಪಿಎಲ್‌ನಲ್ಲಿ 177 ಪಂದ್ಯಗಳಲ್ಲಿ 37.84 ಸರಾಸರಿಯಲ್ಲಿ 5412 ರನ್ ಗಳಿಸಿದ್ದಾರೆ. ಮತ್ತು ಐಪಿಎಲ್‌ನಲ್ಲಿ 131.61 ಸ್ಟ್ರೈಕ್ ರೇಟ್ ಹೊಂದಿದ್ದು ಟೂರ್ನಿಯಲ್ಲೇ ಅತಿ ಹೆಚ್ಚು. ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ 126 ಪಂದ್ಯಗಳಲ್ಲಿ 4706 ರನ್ ಗಳಿಸಿದ್ದಾರೆ. ಇಬ್ಬರೂ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತು ಅವರ ಪ್ರದರ್ಶನ ಗೆಲುವನ್ನು ನಿರ್ಧರಿಸುತ್ತದೆ.

ಕಳೆದ ಮೂರು ಋತುಗಳಲ್ಲಿ ಬೆಂಗಳೂರು ಎಂಟನೇ, ಆರನೇ ಮತ್ತು ಎಂಟನೇ ಸ್ಥಾನ ಗಳಿಸಿದೆ. ಆದರೆ ವಿರಾಟ್ ಪ್ರಸಕ್ತ ಋತುವನ್ನು ಜಯದೊಂದಿಗೆ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ತಂಡದ ಸ್ಥೈರ್ಯವು ಮೊದಲಿನಿಂದಲೂ ಹೆಚ್ಚಿರುತ್ತದೆ. ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ವಿರಾಟ್ ನಾಯಕತ್ವವನ್ನು ಪ್ರಶ್ನಿಸಿದ್ದು, ವಿರಾಟ್ ಬದಲಿಗೆ ಮತ್ತೊಬ್ಬ ನಾಯಕ ಇದ್ದಿದ್ದರೆ ಅವರನ್ನು ನಾಯಕತ್ವದಿಂದ ತೆಗೆದುಹಾಕಬಹುದಿತ್ತು ಎಂದು ಹೇಳಿದ್ದಾರೆ.

ಕೊರೊನಾ ಕಾರಣದಿಂದಾಗಿ ವಿರಾಟ್ ದೀರ್ಘ ವಿರಾಮದ ನಂತರ ಕ್ರಿಕೆಟ್ ಗೆ ಮರಳಿದ್ದಾರೆ. ನಿರಂತರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅವರ ಮೇಲೆ ಯಾವುದೇ ಒತ್ತಡವಿಲ್ಲ ಆದರೆ ಅವರು ತಂಡವನ್ನು ಸಮತೋಲನ ಗೊಳಿಸಬೇಕಾಗಿರುವುದರಿಂದ ತಂಡವು ವಿಜಯದ ಹಾದಿಯಲ್ಲಿ ಮುಂದುವರಿಯ ಬೇಕಿದೆ.

ವಿರಾಟ್ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಡಿವಿಲಿಯರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದು, ಕಳೆದ ವರ್ಷ ವಿಶ್ವಕಪ್‌ಗೆ ಮುನ್ನ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ವಿರಾಟ್ ಮತ್ತು ಡಿವಿಲಿಯರ್ಸ್ ಅವರಲ್ಲದೆ, ಆಸ್ಟ್ರೇಲಿಯಾದ ನಾಯಕ ಏರನ್ ಫಿಂಚ್, ಮೊಯಿನ್ ಅಲಿ, ಯುಜ್ವೇಂದ್ರ ಚಾಹಲ್, ಕ್ರಿಸ್ ಮಾರಿಸ್, ದೇವದತ್ ಪಡಿಕ್ಕಲ್, ಉಮೇಶ್ ಯಾದವ್ ಮತ್ತು ನವದೀಪ್ ಸೈನಿ ಅವರ ರೂಪದಲ್ಲಿ ಬೆಂಗಳೂರಿನಲ್ಲಿ ಹಲವಾರು ಉತ್ತಮ ಆಟಗಾರರಿದ್ದಾರೆ. ಇಂಗ್ಲೆಂಡ್‌ನಿಂದ ಏಕದಿನ ಸರಣಿಯನ್ನು ಗೆದ್ದ ನಂತರ ಫಿಂಚ್ ಐಪಿಎಲ್‌ಗೆ ಕಾಲಿಡುತ್ತಿದ್ದಾರೆ. ಪಡಿಕ್ಕಲ್ ಅವರು 2019-20ರ ದೇಶೀಯ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ಎರಡೂ ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ರನ್ ಬಾರಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ವಾರ್ನರ್‌ನ ಸಾಧನೆ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಆದರೆ ಐಪಿಎಲ್ ನಲ್ಲಿ ಯಾವಾಗಲೂ ಅವರು ಹೆಚ್ಚು ರನ್ ಬಾರಿಸಿದ್ದಾರೆ. ಹೈದರಾಬಾದ್‌ನ ಬ್ಯಾಟಿಂಗ್ ವಾರ್ನರ್‌ ಹೊರತಾಗಿ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ ಮತ್ತು ಮನೀಶ್ ಪಾಂಡೆ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ.
ಹೈದರಾಬಾದ್ ತಂಡದಲ್ಲಿ ಇಬ್ಬರು ಅಫ್ಘಾನಿಸ್ತಾನ ಆಟಗಾರರಾದ ಮೊಹಮ್ಮದ್ ನಬಿ ಮತ್ತು ವಿಶ್ವದ ಅತ್ಯುತ್ತಮ ಲೆಗ್ ಸ್ಪಿನ್ನರ್ ರಶೀದ್ ಖಾನ್ ಇದ್ದಾರೆ. ತಂಡದ ವೇಗದ ಬೌಲಿಂಗ್ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಮತ್ತು ಸಿದ್ಧಾರ್ಥ್ ಕಾಲ್ ಅವರ ಮೇಲೆ ಅವಲಂಬಿತವಾಗಿರುತ್ತದೆ.