ಐಪಿಎಲ್: ರಾಜಸ್ಥಾನ ವಿರುದ್ಧ ಆರ್ ಸಿಬಿಗೆ ಭರ್ಜರಿ ಗೆಲುವು

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ನೇ ಗೆಲುವು ದಾಖಲಿಸಿದೆ.
ಇಲ್ಲಿನ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ, ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿತು.

ಕೊಹ್ಲಿ-ಎಬಿಡಿ ಅಬ್ಬರ:

ರಾಜಸ್ಥಾನ ನೀಡಿದ 178 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಆರ್ ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. 23 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಫಿಂಚ್ (14) ಸ್ಪಿನ್ನರ್ ಶ್ರೇಯಸ್ ಗೋಪಾಲ್ ವಿಕೆಟ್ ಪಡೆದರು.
2 ನೇ ವಿಕೆಟ್ ಗೆ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ತಂಡಕ್ಕೆ ಚೇತರಿಕೆ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್ ಗಳು 79 ರನ್ ಗಳ ಜೊತೆಯಾಟ ನೀಡಿದರು. ಪಡಿಕ್ಕಲ್ (35) ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು.


ನಂತರದ ಎಸೆತದಲ್ಲಿ ಕೊಹ್ಲಿ (43) ಯುವ ವೇಗಿ ಕಾರ್ತಿಕ್ ತ್ಯಾಗಿ ಬೌಲಿಂಗ್ ನಲ್ಲಿ ರಾಹುಲ್ ತೇವಾಟಿಯ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಮುರಿಯದ 4 ನೇ ವಿಕೆಟ್ ಗೆ ಜೊತೆಯಾದ ಡಿವಿಲಿಯರ್ಸ್ ಹಾಗೂ ಗುರುಕೀರತ್ ಸಿಂಗ್, ರಾಜಸ್ಥಾನ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. 77 ರನ್‌ಗಳ ಜೊತೆಯಾಟ ನೀಡುವ ಮೂಲಕ ಆರ್ ಸಿಬಿಗೆ ಭರ್ಜರಿ ಗೆಲುವು ತಂದುಕೊಟ್ಟರು. ಡಿವಿಲಿಯರ್ಸ್ 22 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಯೊಂದಿಗೆ 55 ರನ್ ಗಳಿಸಿದರೆ, ಗುರುಕೀರತ್ (19) ರನ್‌ಗಳಿಸಿ ಅಜೇಯರಾಗುಳಿದರು.

ಮೋರಿಸ್ ಮಾರಕ ದಾಳಿ:
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ವಿಕೆಟ್ ಗೆ ರಾಜಸ್ಥಾನ 50 ರನ್ ಜೊತೆಯಾಟ ನೀಡಿತು. ಸ್ಟೋಕ್ಸ್ (15) ಬೇಗನೆ ನಿರ್ಗಮಿಸಿದರು. ಹೊಡಿಬಡಿ ಆಟದ ಮೂಲಕ ಗಮನಸೆಳೆದ ಉತ್ತಪ್ಪ (41) ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. 8 ನೇ ಓವರ್ ಗೆ ಸ್ಪಿನ್ನರ್ ಕೈಗೆ ಕೊಹ್ಲಿ ಚೆಂಡು ನೀಡಿದರು. ಚಹಲ್ ಅತ್ಯದ್ಭುತ ಸ್ಪೆಲ್ ಮಾಡಿದರು. 7.4 ನೇ ಎಸೆತದಲ್ಲಿ ಉತ್ತಪ್ಪ ವಿಕೆಟ್ ಪಡೆದರು. ನಂತರದ ಎಸೆತದಲ್ಲಿ ಸಂಜು ಸ್ಯಾಮ್ಸನ್ (9) ವಿಕೆಟ್ ಪಡೆದ ಚಹಲ್ ರಾಜಸ್ಥಾನಕ್ಕೆ ದೊಡ್ಡ ಪೆಟ್ಟು ನೀಡಿದರು.
ನಾಯಕ ಸ್ಮಿತ್ (57), ಬಟ್ಲರ್ (24) ಹಾಗೂ ರಾಹುಲ್ ತೇವಾಟಿಯ ಅಜೇಯ 19 ರನ್‌ಗಳ ನೆರವಿನಿಂದ ರಾಜಸ್ಥಾನ 20 ಓವರಲ್ಲಿ 6 ವಿಕೆಟ್ ಗೆ 177 ರನ್‌ಗಳಿಸಿತು.
ಆರ್ ಸಿಬಿ ಪರ ವೇಗಿ ಮೋರಿಸ್ 4, ಚಹಲ್ 2 ವಿಕೆಟ್ ಪಡೆದರು.

ಸ್ಕೋರ್ ವಿವರ

ರಾಜಸ್ಥಾನ ರಾಯಲ್ಸ್ 20 ಓವರಲ್ಲಿ 177/6
ಉತ್ತಪ್ಪ ಸಿ ಫಿಂಚ್ ಬಿ ಚಹಲ್ 41(22)
ಸ್ಟೋಕ್ಸ್ ಸಿ ಡಿವಿಲಿಯರ್ಸ್ ಬಿ ಮೋರಿಸ್ 15(19)
ಸಂಜು ಸ್ಯಾಮ್ಸನ್ ಸಿ ಮೋರಿಸ್ ಬಿ ಚಹಲ್ 09(06)
ಸ್ಟೀವ್ ಸ್ಮಿತ್ ಸಿ ಶಹಬಾಸ್ ಬಿ ಮೋರಿಸ್ 57(36)
ಬಟ್ಲರ್ ಸಿ ಸೈನಿ ಬಿ ಮೋರಿಸ್ 24(25)
ತೇವಾಟಿಯ ಅಜೇಯ 19(11)
ಆರ್ಚರ್ ಎಲ್ ಬಿ ಬಿ ಮೋರಿಸ್ 02(03)
ಇತರೆ: 10(ಬೈ 01, ಲೆಗ್ ಬೈ 02, ವೈಡ್ 07)

ವಿಕೆಟ್ ಪತನ: 1-50(ಸ್ಟೋಕ್ಸ್), 2-69(ಉತ್ತಪ್ಪ), 3-69(ಸಂಜು), 4-127(ಬಟ್ಲರ್), 5-173(ಸ್ಮಿತ್), 6-177(ಆರ್ಚರ್)

ಬೌಲಿಂಗ್: ಸುಂದರ್ 3-0-25-0 ಮೋರಿಸ್ 4-0-26-4, ಉದಾನ 3-0-43-0, ಸೈನಿ 4-0-30-0, ಚಹಲ್ 4-0-34-2, ಶಹಬಾಸ್ 2-0-18-0

ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರಲ್ಲಿ 179/3
ಪಡಿಕ್ಕಲ್ ಸಿ ಸ್ಟೋಕ್ಸ್ ಬಿ ತೇವಾಟಿಯ 35(37)
ಫಿಂಚ್ ಸಿ ಉತ್ತಪ್ಪ ಬಿ ಶ್ರೇಯಸ್ ಗೋಪಾಲ್ 14(11)
ಕೊಹ್ಲಿ ಸಿ ತೇವಾಟಿಯ ಬಿ ತ್ಯಾಗಿ 43(32)
ಡಿವಿಲಿಯರ್ಸ್ ಅಜೇಯ 55(22)
ಗುರುಕೀರತ್ ಅಜೇಯ 19(17)
ಇತರೆ: 13(ಲೆಗ್ ಬೈ 01, ನೋಬಾಲ್ 01, ವೈಡ್ 11)

ವಿಕೆಟ್ ಪತನ: 1-23(ಫಿಂಚ್), 2-102(ಪಡಿಕ್ಕಲ್), 3-102(ಕೊಹ್ಲಿ)

ಬೌಲಿಂಗ್: ಆರ್ಚರ್ 3.4-0-38-0, ಶ್ರೇಯಸ್ ಗೋಪಾಲ್ 4-0-32-1, ತ್ಯಾಗಿ 4-0-32-1, ಉನಾದ್ಕತ್ 4-0-46-0, ತೇವಾಟಿಯ 4-0-30-1

ಪಂದ್ಯ ಶ್ರೇಷ್ಠ: ಎಬಿ ಡಿವಿಲಿಯರ್ಸ್