ಐಪಿಎಲ್: ಮುಂಬೈ ಫೈನಲ್ ಗೆ ಭರ್ಜರಿ ಎಂಟ್ರಿ

ದುಬೈ: ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಜಸ್ ಪ್ರೀತ್ ಬೂಮ್ರಾ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್ ನಲ್ಲಿ 57 ರನ್ ಗಳ ಗೆಲುವು ಸಾಧಿಸಿತು.


ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರಲ್ಲಿ 5 ವಿಕೆಟ್‌ ಗೆ 200 ರನ್ ಗಳಿಸಿತು. ಇದಕ್ಕುತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರಲ್ಲಿ 8 ವಿಕೆಟ್ ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.


ಬೂಮ್ರಾ ಮಾರಕ ದಾಳಿ:

201 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಖಾತೆ ತೆರೆಯುವ ಮುನ್ನವೇ ಅಗ್ರ ಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪೃಥ್ವಿ (0), ಧವನ್ (0) ಹಾಗೂ ರಹಾನೆ (0) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ನಾಯಕ ಶ್ರೇಯಸ್ ಅಯ್ಯರ್ (12) ಬೇಗನೆ ನಿರ್ಗಮಿಸಿದರು. ಸ್ಟೋಯ್ನಿಸ್ (65) ಹಾಗೂ ಅಕ್ಷರ್ ಪಟೇಲ್ (42) ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ಇಬ್ಬರ ಆಟ ವ್ಯರ್ಥ ವಾಯಿತು. ಬೂಮ್ರಾ 4, ಬೌಲ್ಟ್ 2 ವಿಕೆಟ್ ಪಡೆದರು.


23 ಎಸೆತ 60 ರನ್:


ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲಿಲ್ಲ. ರೋಹಿತ್ (0) ಬೇಗನೆ ನಿರ್ಗಮಿಸಿದರು. ಡಿಕಾಕ್ (40), ಸೂರ್ಯಕುಮಾರ್ (51), ಕಿಶನ್ (55), ಕೊನೆಯಲ್ಲಿ ಹಾರ್ದಿಕ್ (37) ಅಬ್ಬರದ ಬ್ಯಾಟಿಂಗ್ ನಡೆಸಿದರು‌. ಕೊನೆಯ 23 ಎಸೆತಗಳಲ್ಲಿ ಹಾರ್ದಿಕ್ ಹಾಗೂ ಕಿಶನ್ ಜೋಡಿ 60 ರನ್ ಚಚ್ಚುವ ಮೂಲಕ ಮುಂಬೈ ಬೃಹತ್ ಮೊತ್ತ ದಾಖಲಿಸಲು ನೆರವಾದರು. ಡೆಲ್ಲಿ ಪರ ಅಶ್ವಿನ್ 3 ವಿಕೆಟ್ ಪಡೆದರು.

ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರಲ್ಲಿ 200/5
ಡಿಕಾಕ್ ಸಿ ಧವನ್ ಬಿ ಅಶ್ವಿನ್ 40(25)
ರೋಹಿತ್ ಎಲ್ ಬಿ ಬಿ ಅಶ್ವಿನ್ 00(01)
ಸೂರ್ಯ ಕುಮಾರ್ ಸಿ ಸಮ್ಸ್ ಬಿ ನೋಕಿಯೆ 51(38)
ಕಿಶನ್ ಅಜೇಯ 55(30)
ಪೊಲ್ಲಾರ್ಡ್ ಸಿ ರಬಾಡ ಬಿ ಅಶ್ವಿನ್ 00(02)
ಕೃನಾಲ್ ಸಿ ಸಮ್ಸ್ ಬಿ ಸ್ಟೋಯ್ನಿಸ್ 13(10)
ಹಾರ್ದಿಕ್ ಅಜೇಯ 37(14)
ಇತರೆ: 04(ಬೈ 01, ಲೆಗ್ ಬೈ 02, ವೈಡ್ 01)
ವಿಕೆಟ್‌ ಪತನ: 1-16(ರೋಹಿತ್), 2-78(ಡಿಕಾಕ್), 3-100(ಸೂರ್ಯ), 4-101(ಪೊಲ್ಲಾರ್ಡ್), 5-140(ಕೃನಾಲ್)

ಬೌಲಿಂಗ್: ಸಮ್ಸ್ 4-0-44-0, ಅಶ್ವಿನ್ 4-0-29-3, ರಬಾಡ 4-0-42-0-, ಅಕ್ಷರ್ 3-0-27-0, ನೋಕಿಯೆ 4-0-50-1, ಸ್ಟೋಯ್ನಿಸ್ 1-0-5-1

ಡೆಲ್ಲಿ ಕ್ಯಾಪಿಟಲ್ಸ್ 20 ಓವರಲ್ಲಿ 143/8
ಪೃಥ್ವಿ ಸಿ ಡಿಕಾಕ್ ಬಿ ಬೌಲ್ಟ್ 00(02)
ಧವನ್ ಬಿ ಬೂಮ್ರಾ 00(02)
ರಹಾನೆ ಎಲ್ ಬಿ ಬಿ ಬೌಲ್ಟ್ 00(03)
ಶ್ರೇಯಸ್ ಸಿ ರೋಹಿತ್ ಬಿ ಬೂಮ್ರಾ 12(08)
ಸ್ಟೋಯ್ನಿಸ್ ಬಿ ಬೂಮ್ರಾ 65(46)
ರಿಷಭ್ ಸಿ ಸೂರ್ಯ ಬಿ ಕೃನಾಲ್ 03(09)
ಅಕ್ಷರ್ ಸಿ ರಾಹುಲ್ ಬಿ ಪೊಲ್ಲಾರ್ಡ್ 42(33)
ಸಮ್ಸ್ ಸಿ ಡಿಕಾಕ್ ಬಿ ಬೂಮ್ರಾ 00(02)
ರಬಾಡ ಅಜೇಯ 15(15)
ನೋಕಿಯೆ 00(00)
ಇತರೆ: 06(ವೈಡ್ 06)

ವಿಕೆಟ್‌ ಪತನ: 1-0(ಪೃಥ್ವಿ), 2-0(ರಹಾನೆ), 3-0(ಧವನ್), 4-20(ಶ್ರೇಯಸ್), 5-41(ರಿಷಭ್), 6-112(ಸ್ಟೋಯ್ನಿಸ್), 7-112(ಸಮ್ಸ್), 8-141(ಅಕ್ಷರ್)

ಬೌಲಿಂಗ್ : ಬೌಲ್ಟ್ 2-1-9-2, ಬೂಮ್ರಾ 4-1-14-4, ಕೃನಾಲ್ 4-0-22-1, ಕಲ್ಟರ್ ನೈಲ್ 4-0-27-0, ಪೊಲ್ಲಾರ್ಡ್ 4-0-36-1, ರಾಹುಲ್ ಚಹರ್ 2-0-35-0

ಪಂದ್ಯ ಶ್ರೇಷ್ಠ: ಜಸ್ ಪ್ರೀತ್ ಬೂಮ್ರಾ