ಐಪಿಎಲ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಿ: ಸೋಮನಗೌಡ ಎಸ್. ಕಲ್ಲೂರ

ವಿಜಯಪುರ, ಎ.19-ಐಪಿಎಲ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕು ಎಂದು ಅಂತಾರಾಷ್ಟ್ರೀಯ ಬಸವ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಸೋಮನಗೌಡ ಎಸ್. ಕಲ್ಲೂರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದಿನೇ ದಿನೆ ಜಿಲ್ಲೆಯಾಧ್ಯಂತ ಬೆಟ್ಟಿಂಗ್ ದಂದೆ ಜೋರಾಗಿ ನಡೆದಿದ್ದು ಇದಕ್ಕೆ ಅಮಾಯ ಯುವಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಬೆಟ್ಟಿಂಗ್ ದಂದೆ ಹಲವಾರು ಜನರು ತಮ್ಮ ಮನೆ, ಆಸ್ತಿಯನ್ನು ಮಾರಿಕೊಂಡು ಬೀದಿ ಬಂದ ಉದಾಹರಣೆ ಬಹಳಷ್ಟಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಈ ಹಿಂದೆ ಐಜಿ ಅಲೋಕಕುಮಾರ ಅವರಿದ್ದಾಗ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಿದ್ದರು. ಆದರೆ ಈಗ ಬೆಟ್ಟಿಂಗ್ ದಂದೆ ಎಗ್ಗಿಲ್ಲದೆ ಜಿಲ್ಲೆಯ ಎಲ್ಲ ಗಲ್ಲಿ ಗಲ್ಲಿಗಳಲ್ಲಿ ಅಲ್ಲಲ್ಲಿ ಬೆಟ್ಟಿಂಗ್ ದಂದೆ ರಾಜಾರೋಷವಾಗಿ ನಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಿರುವ ವಿಷಯ. ಆದರೂ ಇದಕ್ಕೆ ಕಡಿವಾಣ ಹಾಕದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಕೂಡಲೇ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಿ ನೆಮ್ಮದಿಯ ಸಮಾಜವನ್ನು ನಿರ್ಮಿಸುವಲ್ಲಿ ಜವಾಬ್ದಾರಿಯುತ ಅಧಿಕಾರವನ್ನು ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಬೇಕೆಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕಲ್ಲೂರ ಒತ್ತಾಯಿಸಿದ್ದಾರೆ.