ಐಪಿಎಲ್ ಪಂದ್ಯ ತಾರಾ ಆಟಗಾರರು ಗೈರು

ಮುಂಬೈ,ಏ.೧- ಇಂಡಿಯನ್ ಪ್ರೀಮಿಯರ್ ಲೀಗ್‌ನ ೧೪ನೇ ಆವೃತ್ತಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಆರಂಭಿಕ ಪಂದ್ಯಗಳಲ್ಲಿ ಹೆಸರಾಂತ ಆಟಗಾರರು ಪಂದ್ಯದಿಂದ ದೂರ ಉಳಿದಿದ್ದಾರೆ.
ಸ್ಟಾರ್ ಆಟಗಾರರಾದ ಜೋಫ್ರಾ ಆರ್ಚರ್ ಹಾಗೂ ಕಾಗಿಸೊ ರಬಾಡ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇದರ ಜತೆಗೆ ತಾರಾ ಆಟಗಾರರು ವಿವಿಧ ಕಾರಣಗಳಿಂದಾಗಿ ಐಪಿಎಲ್‌ನಲ್ಲಿ ಆಡುತ್ತಿಲ್ಲ.
ಮುಂದಿನವಾರ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯ ಆಥಿತ್ಯ ವಹಿಸಲಿದ್ದು, ಎಲ್ಲ ಪ್ರಮುಖ ಆಟಗಾರರು ಈ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಚೆನ್ನೈ ಸೂಪರ್‌ಕಿಂಗ್ಸ್ ಟೂರ್ನಿ ಆರಂಭದಲ್ಲಿ ಬೌಲಿಂಗ್ ವಿಭಾಗದಲ್ಲಿ ಕೆಲವು ಪ್ರಮುಖ ಬೌಲರ್‌ಗಳ ಸೇವೆಯಿಂದ ವಂಚಿತವಾಗಲಿದೆ. ಆಡಂ ಜಂಪಾ ಹಸೆಮಣೆ ಏರುತ್ತಿರುವುದರಿಂದ ಆರಂಭಿಕ ಪಂದ್ಯಗಳಲ್ಲಿ ಆರ್‌ಸಿಬಿ ಪರ ಆಡುತ್ತಿಲ್ಲ.
ಮಿಚೆಲ್ ಮಾರ್ಚ್ ಹೈದರಾಬಾದ್ ತಂಡದ ಪರ ಆಡುತ್ತಿಲ್ಲ. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮೆನ್ ಕ್ವಿಂಟನ್ ಡಿಕಾಕ್ ಮೊದಲ ೪ ಪಂದ್ಯಗಳು ಪೂರ್ಣಗೊಂಡ ಬಳಿಕ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.