ಐಪಿಎಲ್ ಧೋನಿ ಪಡೆಗೆ ಭರ್ಜರಿ ಗೆಲುವು

ಮುಂಬೈ, ಏ. 19- ಚೆನ್ನೈ ಸೂಪರ್ ಕಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ಇಂದು ಹೀನಾಯ ಸೋಲು ಅನುಭವಿಸಿತು.
ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ‌ ಐಪಿಎಲ್ ಪಂದ್ಯದಲ್ಲಿ ಧೋನಿ ಪಡೆ 45 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು.


ಗೆಲುವಿಗೆ ಅಗತ್ಯವಿದ್ದ 189 ರನ್ ಗಳ ಬೆನ್ನಹತ್ತಿದ ರಾಜಸ್ಥಾನ ತಂಡ ಜೋಸ್ ಬಟ್ಲರ್ 35 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ಬಾರಿಸಿ 49 ರನ್ ಗಳಿಸಿದರು.
ರಾಜಸ್ಥಾನ ಪರ ಬಟ್ಲರ್ ಹೊರತುಪಡಿಸಿ‌ ನಾಯಕ ಸಂಜು ಸೇರಿದಂತೆ ಉಳಿದ ಆಟಗಾರರು ದಿಟ್ಟ ಆಟ ಪ್ರದರ್ಶಿಸಲು ವಿಫಲರಾಗಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಶಿವಂ ದುಬೆ 17 ರನ್ ಗಳಿಸಿದರು.


ಜಯದೇವ್ 24 ರಾಹುಲ್ 20 ರನ್ ಗಳಿಸಿದರು.
ಅಂತಿಮವಾಗಿ ರಾಜಸ್ಥಾನ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲಿಗೆ ಶರಣಾಯಿತು.
ಸಿಎಸ್ ಕೆ ಪರ ಮೊಯಿನ್ ಅಲಿ 3, ಜಡೇಜಾ ಹಾಗೂ ಕ್ಯೂರನ್ ತಲಾ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಧೋನಿ ಪಡೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು.ಡುಪ್ಲೆಸಿಸ್ 33, ಮೊಯಿನ್ ಅಲಿ 26, ಅಂಬಟಿ ರಾಯುಡು 27 ರನ್ ಗಳಿಸಿದರು.
ನಾಯಕ ಧೋನಿ, ಸುರೇಶ್ ರೈನಾ ಹಾಗೂ ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಬ್ರಾವೊ ಎಂಟು ಎಸೆತಗಳಲ್ಲಿ 20 ರನ್ ಹಾಗೂ ಸ್ಯಾಮ್ ಕ್ಯುರನ್ 13ರನ್ ಗಳಿಸಿ ಔಟಾಗದೆ ಉಳಿದರು.
ಆದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ‌ ಜಡೇಜಾ ಮಿಂಚಿದರು.