ಐಪಿಎಲ್: ಡೆಲ್ಲಿ ವಿರುದ್ಧ ಹೈದ್ರಾಬಾದ್ ಗೆ ಭರ್ಜರಿ ಗೆಲುವು

ದುಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಸನ್ ರೈಸರ್ಸ್ ಹೈದ್ರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 88 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ಹೈದ್ರಾಬಾದ್ ಪ್ಲೇ ಆಫ್ ಆಸೆಯನ್ನು ಜೀವಂತ ಇರಿಸಿಕೊಂಡಿದೆ. ಡೆಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ 3 ನೇ ಸ್ಥಾನಕ್ಕೆ ಕುಸಿಯಿತು.

ಕರಾರುವಕ್ ಬೌಲಿಂಗ್ ದಾಳಿ:
ಹೈದ್ರಾಬಾದ್ ನೀಡಿದ 220 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಆರಂಭದಲ್ಲಿ ಆಘಾತ ಅನುಭವಿಸಿತು. 14 ರನ್‌ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಹೈದ್ರಾಬಾದ್ ಬೌಲರ್ ಗಳ ಮಾರಕ ದಾಳಿಗೆ ಉತ್ತರಿಸಲಾಗದ ಡೆಲ್ಲಿ ಬ್ಯಾಟ್ಸ್‌ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಡೆಲ್ಲಿ ಪರ ರಿಷಭ್ ಪಂತ್ (36), ಅಜಿಂಕ್ಯ ರಹಾನೆ (26), ತುಷಾರ್ ದೇಶಪಾಂಡೆ (20*), ಹೆಟ್ಮೇಯರ್ (16) ರನ್ ಗಳಿಸಿದ್ದು ಹೊರತುಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್ ಗಳು ಒಂದಂಕಿ ಮೊತ್ತ ದಾಟಲಿಲ್ಲ. ಡೆಲ್ಲಿ 19 ಓವರಲ್ಲಿ 131 ರನ್ ಗಳಿಗೆ ಆಲೌಟ್ ಆಯಿತು.

ಸಾಹ-ವಾರ್ನರ್ ಅಬ್ಬರ:


ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಗಿಟ್ಟಿಸಿದ ಹೈದ್ರಾಬಾದ್ ಭರ್ಜರಿ ಆರಂಭ ಪಡೆಯಿತು. ಮೊದಲ ಪವರ್ ಪ್ಲೇ ನಲ್ಲಿ ವಿಕೆಟ್ ನಷ್ಟವಿಲ್ಲದೇ 77 ರನ್ ಗಳಿಸಿದರು. ಮೊದಲ ವಿಕೆಟ್‌ ಗೆ ಈ ಜೋಡಿ 107 ರನ್ ಕಲೆಹಾಕಿತು. ವಾರ್ನರ್ (66) ಸ್ಪಿನ್ನರ್ ಅಶ್ವಿನ್ ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. 2 ನೇ ವಿಕೆಟ್‌ ಗೆ ಸಾಹ ಹಾಗೂ ಮನೀಶ್ ಪಾಂಡೆ 63 ರನ್ ಗಳ ಜೊತೆಯಾಟ ನೀಡಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಸಾಹ 45 ಎಸೆತಗಳಲ್ಲಿ 87 ರನ್‌ಗಳಿಸಿದರು. ಕೊನೆಯಲ್ಲಿ ಮನೀಶ್ 44, ಕೇನ್ ವಿಲಿಯಮ್ಸ‌ನ್ 11 ರನ್ ಗಳಿಸಿ ಅಜೇಯರಾಗುಳಿದರು. ಹೈದ್ರಾಬಾದ್ 20 ಓವರಲ್ಲಿ 2 ವಿಕೆಟ್‌ ಗೆ 219 ರನ್ ಗಳಿಸಿತು.

ಸ್ಕೋರ್ ವಿವರ
ಸನ್ ರೈಸರ್ಸ್ ಹೈದ್ರಾಬಾದ್ 20 ಓವರಲ್ಲಿ 219/2
ವಾರ್ನರ್ ಸಿ ಅಕ್ಷರ್ ಬಿ ಅಶ್ವಿನ್ 66(34)
ಸಾಹ ಸಿ ಶ್ರೇಯಸ್ ಬಿ ನೋಕಿಯೆ 87(45)
ಮನೀಶ್ ಪಾಂಡೆ ಅಜೇಯ 44(31)
ವಿಲಿಯಮ್ಸನ್ ಅಜೇಯ 11(10)
ಇತರೆ: 11(ಲೆಗ್ ಬೈ 07, ವೈಡ್ 04)

ವಿಕೆಟ್ ಪತನ: 1-107(ವಾರ್ನರ್), 2-170(ಸಾಹ)

ಬೌಲಿಂಗ್: ನೋಕಿಯೆ 4-0-37-1, ರಬಾಡ 4-0-54-0, ಅಶ್ವಿನ್ 3-0-35-1, ಅಕ್ಷರ್ 4-0-36-0, ತುಷಾರ್ 3-0-35-0, ಸ್ಟೋಯ್ನಿಸ್ 2-0-15-0.

ಡೆಲ್ಲಿ ಕ್ಯಾಪಿಟಲ್ಸ್ 19 ಓವರಲ್ಲಿ 131/10
ರಹಾನೆ ಎಲ್ ಬಿ ಬಿ ರಶೀದ್ 26(19)
ಧವನ್ ಸಿ ವಾರ್ನರ್ ಬಿ ಸಂದೀಪ್ 00(01)
ಸ್ಟೋಯ್ನಿಸ್ ಸಿ ವಾರ್ನರ್ ಬಿ ನದೀಮ್‌ 05(06)
ಹೆಟ್ಮೇಯರ್ ಬಿ ರಶೀದ್ 16(13)
ರಿಷಭ್ ಸಿ ಸಬ್(ಗೋಸ್ವಾಮಿ) ಬಿ ಸಂದೀಪ್ 36(35)
ಶ್ರೇಯಸ್ ಸಿ ಕೇನ್ ಬಿ ಶಂಕರ್ 07(12)
ಅಕ್ಷರ್ ಸಿ ಸಬ್ (ಗರ್ಗ್) ಬಿ ರಶೀದ್ 01(04)
ರಬಾಡ ಬಿ ನಟರಾಜನ್ 03(07)
ಅಶ್ವಿನ್ ಸಿ ಸಮದ್ ಬಿ ಹೋಲ್ಡರ್ 07(05)
ತುಷಾರ್ ಅಜೇಯ 20(09)
ನೋಕಿಯೆ ಸಿ (ಸಬ್) ಗರ್ಗ್ ಬಿ ನಟರಾಜನ್ 01(03)
ಇತರೆ: 09(ಲೆಗ್ ಬೈ 04, ವೈಡ್ 05)

ವಿಕೆಟ್‌ ಪತನ: 1-1(ಧವನ್), 2-14(ಸ್ಟೋಯ್ನಿಸ್), 3-54(ಹೆಟ್ಮೇಯರ್), 4-55(ರಹಾನೆ), 5-78(ಶ್ರೇಯಸ್), 6-83(ಅಕ್ಷರ್), 7-103(ರಬಾಡ), 8-103(ರಿಷಭ್), 9-125(ಅಶ್ವಿನ್), 10-131(ನೋಕಿಯೆ)

ಬೌಲಿಂಗ್: ಸಂದೀಪ್ 4-0-27-2, ನದೀಮ್ 1-0-8-1, ಹೋಲ್ಡರ್ 4-0-46-1, ರಶೀದ್ 4-0-7-3, ನಟರಾಜನ್ 4-0-26-2, ಶಂಕರ್ 1.5-0-11-1, ವಾರ್ನರ್ 0.2-0-2-0

ಪಂದ್ಯ ಶ್ರೇಷ್ಠ: ವೃದ್ಧಿಮಾನ್ ಸಾಹ