ಐಪಿಎಲ್: ಡೆಲ್ಲಿ ವಿರುದ್ಧ ಸೋತರೂ ಆರ್ ಸಿಬಿ ಪ್ಲೇ ಆಫ್ ಗೆ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯಲ್ಲಿ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗಳ ಸೋಲು ಅನುಭವಿಸಿದ ಆರ್ ಸಿಬಿ ಪ್ಲೇ ಆಫ್ ಹಂತಕ್ಕೇರಿತು.
ಈ ಪಂದ್ಯ ದಲ್ಲಿ ಡೆಲ್ಲಿ, 17.3 ಓವರಲ್ಲಿ ಗೆಲುವು ಸಾಧಿಸಿದ್ದರೆ, ಆರ್ ಸಿಬಿಯ ಪ್ಲೇ ಆಫ್ ಕನಸು ಭಗ್ನಗೊಳ್ಳುತ್ತಿತ್ತು. ಆದರೆ ಡೆಲ್ಲಿ, ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವಿಗಾಗಿ 19 ಓವರ್ ತೆಗೆದುಕೊಂಡಿದ್ದರಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಿಂತ ಉತ್ತಮ ನೆಟ್ ರನ್ ರೇಟ್ ಹೊಂದಿದ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿತು.


ರಹಾನೆ ಅರ್ಧಶತಕ:

153 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕೆಟ್ಟ ಆರಂಭ ಪಡೆಯಿತು. ಪೃಥ್ವಿ ಶಾ (9) ಬೇಗನೆ ನಿರ್ಗಮಿಸಿದರು. 2 ನೇ ವಿಕೆಟ್ ಗೆ ಧವನ್ ರಹಾನೆ 88 ರನ್ ಗಳ ಜೊತೆಯಾಟ ಪಂದ್ಯದ ದಿಕ್ಕನ್ನು ಬದಲಿಸಿತು.

ಧವನ್ (54) ರಹಾನೆ (60) ರನ್ ಗಳಿಸುವ ಮೂಲಕ ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆರ್ ಸಿಬಿ ಪರ ಶಬಾಜ್ ಅಹ್ಮದ್ 2 ವಿಕೆಟ್ ಪಡೆದರು.

ಪಡಿಕ್ಕಲ್, ಎಬಿಡಿ ಆಸರೆ:

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಜೋಶ್ವಾ ಫಿಲಿಪ್ಪೆ (12) ಬೇಗನೆ ನಿರ್ಗಮಿಸಿದರು. ದೇವದತ್ ಪಡಿಕ್ಕಲ್ (50), ಡಿವಿಲಿಯರ್ಸ್ (35), ನಾಯಕ ಕೊಹ್ಲಿ (29) ಹಾಗೂ ಕೊನೆಯಲ್ಲಿ ಶಿವಂ ದುಬೆ (17) ಹೋರಾಟದಿಂದ ಆರ್ ಸಿಬಿ 20 ಓವರಲ್ಲಿ 7 ವಿಕೆಟ್ ಗೆ 152 ರನ್ ಗಳಿಸಿತು.

ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರಲ್ಲಿ 152/7
ಜೋಶ್ವಾ ಫಿಲಿಪ್ಪೆ ಸಿ ಪೃಥ್ವಿ ಬಿ ರಬಾಡ 12(17)
ಪಡಿಕ್ಕಲ್ ಬಿ ನೋಕಿಯೆ 50(41)
ಕೊಹ್ಲಿ ಸಿ ಸ್ಟೋಯ್ನಿಸ್ ಬಿ ಅಶ್ವಿನ್ 29(24)
ಡಿವಿಲಿಯರ್ಸ್ ರನೌಟ್ (ರಹಾನೆ/ಪಂತ್) 35(21)
ಮೋರಿಸ್ ಸಿ ಪಂತ್ ಬಿ‌ ನೋಕಿಯೆ 00(02)
ದುಬೆ ಸಿ ರಹಾನೆ ಬಿ ರಬಾಡ 17(11)
ಸುಂದರ್ ಅಜೇಯ 00(01)
ಉದಾನ ಸಿ ರಹಾನೆ ಬಿ ನೋಕಿಯೆ 04(02)
ಶಬಾಜ್ ಅಹ್ಮದ್ ಅಜೇಯ 01(01)
ಇತರೆ: 04(ಲೆಗ್ ಬೈ 01, ವೈಡ್ 03)
ವಿಕೆಟ್ ಪತನ: 1-25(ಫಿಲಿಪ್ಪೆ), 2-82(ಕೊಹ್ಲಿ), 3-112(ಪಡಿಕ್ಕಲ್) 4-112(ಮೋರಿಸ್), 5-145(ದುಬೆ), 6-146(ಡಿವಿಲಿಯರ್ಸ್), 7-150(ಉದಾನ)

ಬೌಲಿಂಗ್: ಸಮ್ಸ್ 4-0-40-0, ಅಶ್ವಿನ್ 4-0-18-1, ನೋಕಿಯೆ 4-0-33-3, ರಬಾಡ 4-0-30-2, ಅಕ್ಷರ್ 4-0-30-0

ಡೆಲ್ಲಿ ಕ್ಯಾಪಿಟಲ್ಸ್ 19 ಓವರಲ್ಲಿ 154/4
ಪೃಥ್ವಿ ಶಾ ಬಿ ಸಿರಾಜ್ 09(06)
ಧವನ್ ಸಿ ದುಬೆ ಬಿ ಶಬಾಜ್ 54(41)
ರಹಾನೆ ಸಿ ದುಬೆ ಬಿ ಸುಂದರ್ 60(46)
ಶ್ರೇಯಸ್ ಸಿ ಸಿರಾಜ್ ಬಿ ಶಬಾಜ್ 07(09)
ಪಂತ್ ಅಜೇಯ 08(07)
ಸ್ಟೋಯ್ನಿಸ್ ಅಜೇಯ 10(05)
ಇತರೆ: 06(ಲೆಗ್ ಬೈ 03, ವೈಡ್ 03)

ವಿಕೆಟ್‌ ಪತನ: 1-19(ಪೃಥ್ವಿ), 2-107(ಧವನ್), 3-130(ಶ್ರೇಯಸ್), 4-136(ರಹಾನೆ)

ಬೌಲಿಂಗ್: ಮೋರಿಸ್ 2-0-19-0, ಸಿರಾಜ್ 3-0-29-1, ಸುಂದರ್ 4-0-24-1, ಉದಾನ 2-0-24-0, ಚಹಲ್ 4-0-29-0, ಶಬಾಜ್ 4-0-26-2

ಪಂದ್ಯ ಶ್ರೇಷ್ಠ: ಏನ್ರಿಚ್ ನೋಕಿಯೆ