ಐಪಿಎಲ್ ಟೂರ್ನಿ ರಾಹುಲ್-ಶರ್ಮಾ ಹಣಾಹಣಿ


ಚೆನ್ನೈ,ಏ.೨೩- ಐಪಿಎಲ್‌ನಲ್ಲಿಂದು ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಪಂಜಾಬ್ ಸೆಣಸಲಿದೆ. ಸತತ ಸೋಲುಗಳಿಂದ ಒತ್ತಡಕ್ಕೆ ಸಿಲುಕಿರುವ ಪಂಜಾಬ್, ಜಯದ ಹಳಿಗೆ ಮರಳಬೇಕಿದೆ.
ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯಗಳನ್ನು ಮಾತ್ರ ರಾಹುಲ್ ಪಡೆ ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ. ಆರಂಭಿಕ ಆಟಗಾರರಲ್ಲಿ ರಾಹುಲ್ ಮತ್ತು ಮಯಾಂಕ್ ಉತ್ತಮ ಆರಂಭ ನೀಡುತ್ತಿದ್ದಾರೆ. ಆದರೆ, ಆಕ್ರಮಣಕಾರಿ ಆಟಗಾರ ಕ್ರಿಸ್‌ಗೆಲ್ ಮತ್ತು ನಿಕೋಲಸ್ ಉತ್ತಮ ಆಟ ಪ್ರದರ್ಶಿಸಬೇಕಾಗಿದೆ.
ಆದರೆ ಕಳೆದ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ದೀಪಕ್ ಹೂಡಾ ಭರವಸೆ ಆಟಗಾರರಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟ ಆಡಬೇಕಾಗಿದೆ. ಬೌಲಿಂಗ್ ವಿಭಾಗದಲ್ಲೂ ವೈಫಲ್ಯತೆ ಎದ್ದು ಕಾಣುತ್ತಿದೆ. ಇವೆಲ್ಲವನ್ನೂ ಸರಿದೂಗಿಸಿಕೊಂಡು ರಾಹುಲ್ ಪಡೆ ಉತ್ತಮ ಆಟ ಪ್ರದರ್ಶಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
ಮತ್ತೊಂದೆಡೆ ಎದುರಾಳಿ ಮುಂಬೈ ತಂಡ ಬಲಿಷ್ಠವಾಗಿದ್ದು, ೪ ಪಂದ್ಯಗಳಲ್ಲಿ ೨ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾಧವ್, ಈಶಾನ್ ಕಿಶನ್ ಉತ್ತಮ ಆಟ ಪ್ರದರ್ಶಿಸಲು ವಿಫಲರಾಗಿದ್ದಾರೆ.
ಪೋಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಅವರನ್ನು ನೆಚ್ಚಿಕೊಂಡಿದೆ. ಈ ಪಂದ್ಯ ೨ ತಂಡಗಳಿಗೂ ಮುಖ್ಯವಾಗಿದ್ದು, ಗೆಲುವಿಗಾಗಿ ಹೋರಾಟ ನಡೆಯಲಿದೆ.