ಐಪಿಎಲ್: ಕೋಲ್ಕತಾ ವಿರುದ್ಧ ಪಂಜಾಬ್ ಗೆ ಭರ್ಜರಿ ಗೆಲುವು

ಶಾರ್ಜಾ: ಕರಾರುವಕ್ ಬೌಲಿಂಗ್ ದಾಳಿ ಹಾಗೂ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 8 ವಿಕೆಟ್ ಗಳ ಗೆಲುವು ಸಾಧಿಸಿತು.


ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯಲ್ಲಿ ಸತತ 5 ನೇ ಗೆಲುವು ದಾಖಲಿಸಿದ ಪಂಜಾಬ್, ಪ್ಲೇ ಆಫ್ ಆಸೆಯನ್ನು ಜೀವಂತ ಇರಿಸಿಕೊಂಡಿದೆ.

ಗೇಲ್ ಅಬ್ಬರ:
ಕೆಕೆಆರ್ ನೀಡಿದ 150 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ಉತ್ತಮ ಆರಂಭ ಪಡೆಯಿತು. ಆದರೆ ನಾಯಕ ರಾಹುಲ್ (28) ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವಕಾಶ ನೀಡಲಿಲ್ಲ. 2 ನೇ ವಿಕೆಟ್ ಗೆ ಮಂದೀಪ್ ಸಿಂಗ್ ಜೊತೆಯಾದ ಕ್ರಿಸ್ ಗೇಲ್, ಕೆಕೆಆರ್ ಬೌಲರ್ ಗಳನ್ನು ದಂಡಿಸಿದರು.


ಹೊಡಿ ಬಡಿ ಆಟದ ಮೂಲಕ ಗಮನಸೆಳೆದ ಗೇಲ್ ಕೇವಲ 29 ಎಸೆತಗಳಲ್ಲಿ 5 ಸಿಕ್ಸರ್, 2 ಬೌಂಡರಿ ಯೊಂದಿಗೆ 51 ರನ್ ಗಳಿಸಿದರು. ಮತ್ತೊಂದೆಡೆ ಮಂದೀಪ್ ಸಿಂಗ್ 56 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ನೊಂದಿಗೆ 66 ರನ್ ಗಳಿಸಿ ಅಜೇಯರಾಗುಳಿದರು. ಪಂಜಾಬ್ 18.5 ಓವರಲ್ಲಿ 2 ವಿಕೆಟ್ ಗೆ 150 ರನ್ ಗಳಿಸಿ ಜಯದ ನಗೆ ಬೀರಿತು.

ಗಿಲ್ ಆಸರೆ:


ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ಗೆ ಆರಂಭಿಕ ಬ್ಯಾಟ್ಸ್‌ಮನ್ ಶುಭ್ ಮನ್ ಗಿಲ್ ಆಸರೆಯಾದರು. ಕೇವಲ 10 ರನ್ ಗೆ ಅಗ್ರ ಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್ ಗೆ ಗಿಲ್ ಹಾಗೂ ನಾಯಕ ಮಾರ್ಗನ್ ಆಸರೆ ಯಾದರು. ಗಿಲ್ (57), ಮಾರ್ಗನ್ (40), ಕೊನೆಯಲ್ಲಿ ಲಾಕಿ ಫರ್ಗುಸನ್ (24*) ಹೊರತುಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್ ಗಳು ಒಂದಂಕಿ ಮೊತ್ತ ದಾಟಲಿಲ್ಲ. ಈ ಮೂವರ ಹೋರಾಟದಿಂದ ಕೋಲ್ಕತಾ ಸಾಧಾರಣ ಮೊತ್ತ ಸೇರಿಸಿತು. ಕೆಕೆಆರ್ 20 ಓವರಲ್ಲಿ 9 ವಿಕೆಟ್‌ ಗೆ 149 ರನ್ ಗಳಿಸಿತು.

ಸ್ಕೋರ್ ವಿವರ:
ಕೋಲ್ಕತಾ ನೈಟ್ ರೈಡರ್ಸ್ 20 ಓವರಲ್ಲಿ 149/9
ಗಿಲ್ ಸಿ ಪೂರನ್ ಬಿ ಶಮಿ 57(45)
ರಾಣಾ ಸಿ ಗೇಲ್ ಬಿ ಮ್ಯಾಕ್ಸ್‌ವೆಲ್ 00(01)
ತ್ರಿಪಾಠಿ ಸಿ ರಾಹುಲ್ ಬಿ ಶಮಿ 07(04)
ಕಾರ್ತಿಕ್ ಸಿ ರಾಹುಲ್ ಬಿ ಶಮಿ 00(02)
ಮಾರ್ಗನ್ ಸಿ ಅಶ್ವಿನ್ ಬಿ ಬಿಷ್ಣೋಯಿ 40(25)
ನರೈನ್ ಬಿ ಜೋರ್ಡನ್ 06(04)
ಕಮಲೇಶ್ ಬಿ ಅಶ್ವಿನ್ 06(13)
ಕಮಿನ್ಸ್ ಎಲ್ ಬಿ ಬಿ ಬಿಷ್ಣೋಯಿ 01(08)
ಫರ್ಗುಸನ್ ಅಜೇಯ 24(13)
ಚಕ್ರವರ್ತಿ ಬಿ ಜೋರ್ಡನ್ 02(04)
ಪ್ರಸಿದ್ಧ್ ಅಜೇಯ 00(01)
ಇತರೆ: 06(ಲೆಗ್ ಬೈ 03, ವೈಡ್ 03)

ವಿಕೆಟ್‌ ಪತನ: 1-1(ರಾಣಾ), 2-10(ತ್ರಿಪಾಠಿ), 3-10(ಕಾರ್ತಿಕ್), 4-91(ಮಾರ್ಗನ್), 5-101(ನರೈನ್), 6-113(ಕಮಲೇಶ್), 7-114(ಕಮಿನ್ಸ್), 8-136(ಗಿಲ್), 9-149(ಚಕ್ರವರ್ತಿ)

ಬೌಲಿಂಗ್: ಮ್ಯಾಕ್ಸ್‌ವೆಲ್ 2-0-21-1, ಶಮಿ 4-0-35-3, ಆರ್ಶ್ ದೀಪ್ 2-0-18-0, ಅಶ್ವಿನ್ 4-0-27-1, ಜೋರ್ಡನ್ 4-0-25-2, ಬಿಷ್ಣೋಯಿ 4-1-20-2

ಪಂಜಾಬ್ 18.5 ಓವರಲ್ಲಿ 150/2
ರಾಹುಲ್ ಎಲ್ ಬಿ ಬಿ ಚಕ್ರವರ್ತಿ 28(25)
ಮಂದೀಪ್ ಅಜೇಯ 66(56)
ಕ್ರಿಸ್ ಗೇಲ್ ಸಿ ಪ್ರಸಿದ್ಧ್ ಬಿ ಫರ್ಗುಸನ್ 51(29)
ಪೂರನ್ ಅಜೇಯ 02(03)
ಇತರೆ: (ಬೈ 03, ವೈಡ್ 03)
ವಿಕೆಟ್‌ ಪತನ: 1-47(ರಾಹುಲ್), 2-147(ಗೇಲ್)

ಬೌಲಿಂಗ್: ಕಮಿನ್ಸ್ 4-0-31-0, ಪ್ರಸಿದ್ಧ್ 3-0-24-0, ಚಕ್ರವರ್ತಿ 4-0-34-1, ನರೈನ್ 4-0-27-0, ಫರ್ಗುಸನ್ 3.5-0-32-1

ಪಂದ್ಯ ಶ್ರೇಷ್ಠ: ಕ್ರಿಸ್ ಗೇಲ್