ಐಪಿಎಲ್ ಕೆಕೆಆರ್-ಪಂಜಾಬ್ ಕಾದಾಟ


ಅಹಮದಾಬಾದ್, ಏ,೨೬- ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಂದು ಪಂಬಾಜ್ ಕಿಂಗ್ಸ್ ಮತ್ತು ಕೊಲ್ಕತ್ತ ನೈಟ್ ರೈಡರ್‍ಸ್ ನಡುವೆ ಸೆಣಸಾಟ ನಡೆಯಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್, ಇಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೋಲಿನಿಂದ ಹೊರಬರಹುದೇ ಎಂಬುದು ಕುತೂಹಲ ಕೆರಳಿಸಿದೆ.
ತಂಡಕ್ಕೆ ಗೆಲುವು ಸಾಧಿಸಲು ಅವಕಾಶವಿದ್ದರೂ ಅದನ್ನು ಕೈಚೆಲ್ಲಿರುವ ಕೆಕೆಆರ್ ತೀವ್ರ ಒತ್ತಡಕ್ಕೆ ಸಿಲುಕಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಂಘಟಿತ ಹೋರಾಟ ನಡೆಸಲು ವಿಫಲವಾಗಿರುವುದೇ ಸೋಲಿನ ಸುಳಿಯಿಂದ ಹೊರಬರಲು ಆ ತಂಡಕ್ಕೆ ಸಾಧ್ಯವಾಗುತ್ತಿಲ್ಲ.
ಇಂದಿನ ಪಂದ್ಯದ ಸ್ಥಳ ಬದಲಾವಣೆಯಾಗಿದೆ. ಅಹಮದಾಬಾದ್ ಕ್ರೀಡಾಂಗಣ ಕೆಕೆಆರ್‌ಗೆ ಜಯದ ಲಯಕ್ಕೆ ಮರಳು ಅದೃಷ್ಟ ಒಲಿಯಬಹುದೇ ಎಂಬುದನ್ನು ಕಾದುನೋಡಬೇಕಿದೆ.
ತಂಡದಲ್ಲಿ ಶುಭ್‌ಮನ್‌ಗಿಲ್, ನಿತೀಶ್ ರಾಣಾ, ತ್ರಿಪಾಠಿ,ಮೊರ್ಗನ್, ಕಾರ್ತಿಕ್, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬೇಕಾಗಿದೆ. ಅದೇ ರೀತಿ ಬೌಲಿಂಗ್‌ನಲ್ಲೂ ಪ್ರಸಿದ್ಧ್ ಕೃಷ್ಣ, ರಸೆಲ್ ಇನ್ನಿತರರು ಎದುರಾಳಿ ತಂಡವನ್ನು ಕಟ್ಟಿ ಹಾಕಬೇಕಿದೆ.
ಮತ್ತೊಂದೆಡೆ ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಜಯದ ಅಭಿಯಾನ ಮುಂದುವರೆಸುವ ಉತ್ಸಾಹದಲ್ಲಿದೆ.
ಮಯಾಂಕ್ ಅಗರ್‌ವಾಲ್,ರಾಹುಲ್ , ಕ್ರಿಸ್ ಗೆಲ್ ಅವರ ಬ್ಯಾಟಿಂಗ್‌ನ್ನು ಬಲವಾಗಿ ನೆಚ್ಚಿಕೊಂಡಿದೆ. ಮೊಹ್ಮದ್ ಶಮಿ ಅರ್ಷ್ ದೀಪ್ ಬೌಲಿಂಗ್ ಜವಬ್ದಾರಿಯನ್ನು ಉತ್ತಮ ನಿರ್ವಹಿಸಿದರೆ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯ.
ಇಂದಿನಿಂದ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿರುವುದರಿಂದ ಮೈದಾನ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಹೇಗೆ ಸಹಕಾರಿಯಾಗಲಿದೆ ಎಂಬುದು ಕೌತುಕಕ್ಕೆ ಕಾರಣವಾಗಿದೆ.